Advertisement

Dhoni,Yuvi: ಧೋನಿ, ಯುವಿಗೆ ಎಂಸಿಸಿ ಆಜೀವ ಸದಸ್ಯತ್ವ

12:19 AM Apr 06, 2023 | Team Udayavani |

ಲಂಡನ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಸೇರಿದಂತೆ ಐವರು ಭಾರತೀಯರ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಬುಧವಾರ ಆಜೀವ ಸದಸ್ಯತ್ವ ನೀಡಿದೆ. ಇದರಲ್ಲಿ ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌, ಮಾಜಿ ವೇಗಿ ಜೂಲನ್‌ ಗೋಸ್ವಾಮಿ ಕೂಡ ಸೇರಿದ್ದಾರೆ. ಈ ಪ್ರತಿಷ್ಠಿತ ಗೌರವಕ್ಕೆ ವಿಶ್ವಾದ್ಯಂತ ಟೆಸ್ಟ್‌ ಆಡುವ ಎಂಟು ರಾಷ್ಟ್ರಗಳಿಂದ, ಒಟ್ಟು 19 ಮಂದಿಯನ್ನು ಎಂಸಿಸಿ ಆಯ್ಕೆ ಮಾಡಿಕೊಂಡಿದೆ. ಈ ಆಟಗಾರರು ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಆಧರಿಸಿ ಮೇಲಿನ ಗೌರವ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next