Advertisement

ಧೋನಿ, ಸ್ಮಿತ್‌ ಇಬ್ಬರೂ  ಶ್ರೇಷ್ಠ ನಾಯಕರು: ಫ್ಲೆಮಿಂಗ್‌

12:07 PM May 22, 2017 | |

ಹೈದರಾಬಾದ್‌: ಧೋನಿ ಅವರನ್ನು ಕೆಳಗಿಳಿಸಿದ ಸ್ಮಿತ್‌ ಅವರನ್ನು ಕೂರಿಸಿದ ನಾಯಕತ್ವ ವಿವಾದ ಹೊರಗಡೆ ಆಗಾಗ ಕಾವೇರಿಸಿಕೊಂಡರೂ ರೈಸಿಂಗ್‌ ಪುಣೆ ಸೂಪರ್‌ ಜೈಂಟ್‌ ತಂಡ ದೊಳಗೆ ಇದು ಯಾವುದೇ ಋಣಾತ್ಮಕ ಪರಿಣಾಮ ವನ್ನೂ ಬೀರಲಿಲ್ಲ. ಇದಕ್ಕೆ ಪುಣೆಯ ಫೈನಲ್‌ ಪ್ರವೇಶವೇ ಸಾಕ್ಷಿ. ಈ ಪಯಣದ ಹಾದಿಯಲ್ಲಿ ಧೋನಿ ಹಾಗೂ ಸ್ಮಿತ್‌ ಅವ ರಿಬ್ಬರ ಪಾಲು ದೊಡ್ಡ ಮಟ್ಟದಲ್ಲೇ ಇದೆ. ಅಂತಿಮ ಹಣಾಹಣಿಗೂ ಮೊದಲು ಈ ಕುರಿತು ಪ್ರತಿಕ್ರಿಯಿ ಸಿದ ಪುಣೆ ತಂಡದ ಪ್ರಧಾನ ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌, ಇವರಿಬ್ಬರೂ ಶ್ರೇಷ್ಠ ನಾಯಕರು ಎಂದಿದ್ದಾರೆ. 

Advertisement

“ಧೋನಿ ಕಳೆದೊಂದು ದಶಕದ ಯಶಸ್ವೀ ಕ್ರಿಕೆಟಿಗರಲ್ಲೊಬ್ಬರು. ಧೋನಿ ಮತ್ತು ಸ್ಮಿತ್‌ ಇಬ್ಬರೂ ಶ್ರೇಷ್ಠ ನಾಯಕರು. ಇದನ್ನು ಐಪಿಎಲ್‌ನಲ್ಲಿ ಇಬ್ಬರೂ ನಿರೂಪಿಸಿದ್ದಾರೆ’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಕೋಚ್‌ ಕೂಡ ಆಗಿದ್ದ, ಧೋನಿ ಜತೆ ಉತ್ತಮ ಒಡನಾಟ ಹೊಂದಿರುವ ಫ್ಲೆಮಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next