Advertisement

ಧೋನಿಗೆ ಛೀಮಾರಿ

07:53 AM Apr 08, 2017 | Team Udayavani |

ಹೊಸದಿಲ್ಲಿ: ಪುಣೆಯಲ್ಲಿ ಗುರುವಾರ ನಡೆದ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯದ ವೇಳೆ ಐಪಿಎಲ್‌ ನೀತಿ ಸಂಹಿತೆ ಉಲ್ಲಂ ಸಿದ ಎಂಎಸ್‌ ಧೋನಿ ಅವರಿಗೆ ಛೀಮಾರಿ ಹಾಕಲಾಯಿತು.  ಯಾವ ಕಾರಣಕ್ಕಾಗಿ ಮ್ಯಾಚ್‌ ರೆಫ‌ರಿ ಮನು ನಾಯರ್‌ ಛೀಮಾರಿ ಹಾಕಿದ್ದಾರೆ ಎಂಬುದನ್ನು ಐಪಿಎಲ್‌ ಖಚಿತಪಡಿಸಿಲ್ಲ. ಧೋನಿ ಲೆವೆಲ್‌ ಒಂದು ತಪ್ಪು ಎಸೆಗಿದ್ದಾರೆ ಎಂದು ಐಪಿಎಲ್‌ನ ಪ್ರಕಟನೆ ತಿಳಿಸಿದೆ. ಐಪಿಎಲ್‌ನ ನೀತಿ ಸಂಹಿತೆಯಂತೆ ಲೆವೆಲ್‌ ಒಂದು ತಪ್ಪು ಮಾಡಿದವರಿಗೆ ಮ್ಯಾಚ್‌ ರೆಫ‌ರಿ ಅವರ ನಿರ್ಧಾರವೇ ಅಂತಿಮ ಮತ್ತು ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಟ್ವೆಂಟಿ20 ಮಾದರಿಯ ಕ್ರಿಕೆಟ್‌ನನಲ್ಲಿ ಡಿಆರ್‌ಎಸ್‌ ನಿಯಮ ಇಲ್ಲದಿದ್ದರೂ ಧೋನಿ ಅವರು ಅಂಪಾಯರ್‌ ತೀರ್ಪು ಪುನರ್‌ಪರಿಶೀಲನೆಗೆ ಕೈಯಲ್ಲಿ ಸೂಚನೆ ನೀಡಿದ್ದರು. ಇದು ಐಪಿಎಲ್‌ ನೀತಿ ಸಂಹಿತೆ ಪ್ರಕಾರ ತಪ್ಪು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next