Advertisement

ಬರ್ತ್‌ಡೇ ಬಾಯ್‌ ಧೋನಿ 500 ಪಂದ್ಯಗಳ ಸರದಾರ

11:06 AM Jul 08, 2018 | |

ಕಾರ್ಡಿಫ್: ಶನಿವಾರ 37ನೇ ಹರೆಯಕ್ಕೆ ಕಾಲಿರಿಸಿದ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಇದೀಗ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ದೇಶದ 3ನೇ ಹಾಗೂ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಶುಕ್ರವಾರ ನಡೆದ ಟಿ20 ಪಂದ್ಯ ಧೋನಿ ವೃತ್ತಿಜೀವನದ 500ನೇ ಪಂದ್ಯವಾಗಿತ್ತು. 

Advertisement

ಭಾರತದ ಪರ 500 ಅಂತಾರಾಷ್ಟ್ರೀಯ ಪಂದ್ಯ ಗಳನ್ನಾಡಿದ ಉಳಿದಿಬ್ಬರೆಂದರೆ ಸಚಿನ್‌ ತೆಂಡುಲ್ಕರ್‌ (644) ಹಾಗೂ ರಾಹುಲ್‌ ದ್ರಾವಿಡ್‌ (509). ವಿಶ್ವ ಮಟ್ಟದಲ್ಲಿ ಮಾಹೇಲ ಜಯವರ್ಧನೆ (652), ಸನತ್‌ ಜಯಸೂರ್ಯ (586), ರಿಕಿ ಪಾಂಟಿಂಗ್‌ (560), ಶಾಹೀದ್‌ ಅಫ್ರಿದಿ (524), ಜಾಕ್‌ ಕ್ಯಾಲಿಸ್‌ (519) ಈ ಸಾಧನೆ ಮಾಡಿದ್ದಾರೆ.ಟಿ20 ಮಾದರಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಕ್ರಿಕೆಟಿಗ ಎಂಬ ಹೆಗ್ಗಳಿಕೆಯೂ ಧೋನಿ (92) ಹೆಸರಿನಲ್ಲಿದೆ. ಅವರು ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ವಿಶ್ವದ 3ನೇ ಆಟಗಾರ. 

Advertisement

Udayavani is now on Telegram. Click here to join our channel and stay updated with the latest news.

Next