Advertisement

2019ರ ವಿಶ್ವಕಪ್‌ವರೆಗೆ ಧೋನಿಯೇ ಭಾರತದ ವಿಕೆಟ್‌ಕೀಪರ್‌

06:10 AM Dec 24, 2017 | Team Udayavani |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ನಿಟ್ಟುಸಿರುಬಿಡುವ ಸ್ಪಷ್ಟ ಮಾಹಿತಿಯನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ನೀಡಿದ್ದಾರೆ. 

Advertisement

ಇದುವರೆಗೆ ಧೋನಿ ಭಾರತ ತಂಡದಲ್ಲಿ ಎಲ್ಲಿಯವರೆಗೆ ಉಳಿದುಕೊಳ್ಳುತ್ತಾರೆ ಎಂಬ ಕುರಿತೇ ಗೊಂದಲವಿತ್ತು. ಅವರನ್ನು ತಂಡದಿಂದ ಕಿತ್ತುಹಾಕಿ ಯುವಕರಿಗೆ ಅವಕಾಶ ನೀಡಿ ಎಂಬ ಕೂಗು ಕೂಡ ಇತ್ತು. ಈ ಎಲ್ಲ ಗೊಂದಲಗಳ ಮಧ್ಯೆ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಪ್ರಸಾದ್‌, 2019ರ ಏಕದಿನ ವಿಶ್ವಕಪ್‌ವರೆಗೆ ಧೋನಿಯೇ ಭಾರತ ತಂಡದ ವಿಕೆಟ್‌ಕೀಪರ್‌ ಆಗಿರುತ್ತಾರೆಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಯುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಇನ್ನೂ ಎರಡು ವರ್ಷ ಕಾಯುವುದು ಅನಿವಾರ್ಯವಾಗಿದೆ.

ಧೋನಿ ಬದಲಾಗಿ ಕೆಲ ಯುವ ವಿಕೆಟ್‌ ಕೀಪರ್‌ಗಳನ್ನು ಪರಿಶೀಲಿಸಿ ನೋಡಿದೆವು. ಆದರೆ ಅವರ ಸನಿಹವೂ ಉಳಿದವರು ಬರಲಿಲ್ಲ. ಧೋನಿ ಕೇಒವ ಭಾರತ ಮಾತ್ರವಲ್ಲ ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್‌. ಇತ್ತೀಚೆಗೆ ಅವರು ಮಾಡಿದ ಸ್ಟಂಪ್‌ಗ್ಳು, ರನೌಟ್‌ಗಳು ಅದನ್ನು ಸಾಬೀತು ಮಾಡಿವೆ ಎಂದು ಧೋನಿಯನ್ನು ಪ್ರಸಾದ್‌ ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next