Advertisement

ಲಾಕ್ ಡೌನ್ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಏನು ಮಾಡುತ್ತಿದ್ದಾರೆ?

11:31 AM Apr 11, 2020 | keerthan |

ರಾಂಚಿ: ಕೋವಿಡ್-19 ಸೋಂಕು ಕಾರಣದಿಂದ ದೇಶವಿಡಿ ಲಾಕ್ ಡೌನ್ ಆಗಿದೆ.  ಕ್ರೀಡಾ ಕೂಟಗಳು ಕೆಲವು ರದ್ದಾಗಿದ್ದರೆ ಮತ್ತೆ ಕೆಲವು ಮುಂದೂಡಿಕೆಯಾಗಿದೆ. ಭಾರತದ ವರ್ಣರಂಜಿತ ಕ್ರಿಕೆಟ್ ಕೂಟ ಐಪಿಎಲ್ ಈ ವರ್ಷ ನಡೆಯುವ ಲಕ್ಷಣ ಕಾಣುತ್ತಿಲ್ಲ.

Advertisement

ಇಷ್ಟೆಲ್ಲಾ ಆಗುವಾಗ ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಏನು ಮಾಡುತ್ತಿದ್ದಾರೆ ಎಂದು ಅವರ  ಅಭಿಮಾನಿಗಳು ಕೇಳುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಸಿಡಿಯಬೇಕು, ಅದರ ಆಧಾರದಲ್ಲಿ ಟಿ20 ವಿಶ್ವಕಪ್ ಆಡುವ ಬಯಕೆ ಹೊಂದಿದ್ದರು. ಆದರೆ ಈ ಐಪಿಎಲ್ ನಡೆಯದ ಕಾರಣ ಧೋನಿ ರಾಂಚಿಯ ತನ್ನ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

ರಾಂಚಿಯ ತನ್ನ ಫಾರ್ಮ್ ಹೌಸ್ ನಲ್ಲಿ ನಲ್ಲಿರುವ ಮಹೇಂದ್ರ ಸಿಂಗ್ ಧೋನಿ, ತನ್ನ ಮನೆಯ ಲಾನ್ ನಲ್ಲಿ ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ವಿಟ್ಟರ್ ನಲ್ಲಿ ಈ ಫೋಟೊ ಹಾಕಿದೆ.

ಕಳೆದ ವರ್ಷದ ವಿಶ್ವಕಪ್ ಸೆಮಿ ಫೈನಲ್ ಸೋಲಿನ ನಂತರ ಧೋನಿ ಯಾವುದೇ ವೃತ್ತಿಪರ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಲು ಮಾಹಿ ಸಿದ್ದತೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next