Advertisement

ಧೋನಿಯನ್ನು ಈಗಲೇ ನಿವೃತ್ತಿಗೆ ಪ್ರೇರೇಪಿಸುವುದು ಒಳಿತಲ್ಲ: ಹುಸೇನ್‌

12:27 AM Apr 12, 2020 | Sriram |

ಮುಂಬಯಿ: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ಬಗ್ಗೆ ಯಾರೂ ಒತ್ತಡ ಹೇರದಿರಿ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾ

Advertisement

ಕೋವಿಡ್ 19 ವೈರಸ್‌ನಿಂದಾಗಿ 13ನೇ ಆವೃತ್ತಿಯ ಐಪಿಎಲ್‌ ನಡೆಯುವ ಸ್ಪಷ್ಟತೆ ಕೂಡ ಇನ್ನೂ ಗೋಚರಿಸುತ್ತಿಲ್ಲ. ಹಾಗಾಗಿ ಧೋನಿ ಕ್ರಿಕೆಟ್‌ ಭವಿಷ್ಯ ನಿಗೂಢವಾಗಿಯೇ ಇದೆ. ಈ ಬಗ್ಗೆ ಸ್ಟಾರ್‌ನ್ಪೋರ್ಟ್ಸ್ ಜತೆ ಮಾತನಾಡಿದ ಹುಸೇನ್‌, ಧೋನಿ ಅವರನ್ನು ಸದ್ಯದ ಸ್ಥಿತಿಯಲ್ಲಿ ನಿವೃತ್ತಿಗೆ ತಳ್ಳುವುದು ಒಳ್ಳೆಯದಲ್ಲ. ಅವರು ಒಮ್ಮೆ ತಂಡದಿಂದ ಹೊರ ಹೋದರೆ ಮತ್ತೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಭಾರತ ತಂಡಕ್ಕೆ ಮರಳಲು ಧೋನಿ ಅವರಲ್ಲಿ ಈಗಲೂ ಸಾಮರ್ಥ್ಯವಿದೆ. ಈ ವಿಚಾರ ಮಂಡಳಿಯಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೌದು, ಕಳೆದ ವಿಶ್ವಕಪ್‌ ಟೂರ್ನಿ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಧೋನಿ ಅವರು ರನ್‌ ಚೇಸ್‌ ಮಾಡುವಲ್ಲಿ ಎಡವಿರಬಹುದು. ಆದರೆ, ಅವರು ಈಗಲೂ ಅದ್ಭುತ ಪ್ರತಿಭಾವಂತ ಆಟಗಾರ ಆಗಿದ್ದಾರೆ. ಧೋನಿ ನಿವೃತ್ತಿಯ ವಿಷಯದಲ್ಲಿ ಈಗ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಅವರು ಒಮ್ಮೆ ನಿವೃತ್ತಿ ಪಡೆದುಕೊಂಡರೆ, ಅವರನ್ನು ಮತ್ತೇ ಕರೆ ತರಲಾಗುವುದಿಲ್ಲ. ಕೆಲ ಕ್ರಿಕೆಟ್‌ ದಂತಕತೆಗಳನ್ನು ಬಹುಬೇಗ ನಿವೃತ್ತಿಗೆ ತಳ್ಳಬಾರದು’ ಎಂದು ನಾಸಿರ್‌ ಹುಸೇನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next