Advertisement

ತಂಡ ಸೋತಾಗೆಲ್ಲಾ ಸ್ವತಃ ಧೋನಿಯೇ ಸೋಲಿನ ಹೊಣೆ ಹೊರುತ್ತಿದ್ದರು

08:48 AM Apr 27, 2020 | keerthan |

ಚೆನ್ನೈ: ಅವರ ವಿನಮೃತೆಯೇ ಅವರನ್ನು ಬೇರೆ ಎಲ್ಲಾ ಆಟಗಾರರಿಗಿಂತ ಉನ್ನತವಾಗಿರಿಸಿರುವುದು. ಕ್ರೀಡೆಯಲ್ಲಿ ಯಾವತ್ತೂ ಒಬ್ಬ ಕ್ಯಾಪ್ಟನ್ ಮತ್ತು ಲೀಡರ್ ಗೆ ವ್ಯತ್ಯಾಸವಿರುತ್ತದೆ. ಹಾಗೆ ನೋಡುವುದಾದರೆ ಮಹೇಂದ್ರ ಸಿಂಗ್ ಧೋನಿ ಒಬ್ಬ ನಿಜವಾದ ಲೀಡರ್ ಎಂದು ವೇಗಿ ಮೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

Advertisement

31 ವರ್ಷದ ಬಲಗೈ ವೇಗಿ ಮೋಹಿತ್ ಶರ್ಮಾ ಅವರು ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು.

ಯಾವಾಗ  ತಂಡ ಜಯ ಗಳಿಸುತ್ತದೆಯೋ ಆಗ ಧೋನಿ ಮುನ್ನಲೆಗೆ ಬಂದು ನಿಲ್ಲುವುದಿಲ್ಲ. ಆದರೆ ಯಾವಾಗ ತಂಡ ಸೋಲುತ್ತದೆಯೋ ಆಗ ಧೋನಿ ಎದುರಿಗೆ ನಿಲ್ಲುತ್ತಾರೆ. ಸೋಲಿನ ಎಲ್ಲಾ ಹೊಣೆಯನ್ನು ತಾನೇ ಹೊರುತ್ತಾರೆ ಎಂದು ಮೋಹಿತ್ ಶರ್ಮಾ ಹೇಳಿದ್ದಾರೆ.

ಈ ಹಿಂದೆ ಚೆ್ನೈ ಪರವಾಗಿ ಆಡಿದ್ದ ಮೋಹಿತ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ, ಕೋವಿಡ್19 ಸೋಂಕಿನ ಕಾರಣ ಈ ವರ್ಷದ ಐಪಿಎಲ್ ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next