Advertisement

ಧಾರವಾಡ ಎಮ್ಮೆಗೆ  ತಳಿ ಮಾನ್ಯತೆ

11:50 PM Sep 05, 2021 | Team Udayavani |

ಧಾರವಾಡ: ವಿಶ್ವಪ್ರಸಿದ್ಧ  “ಧಾರವಾಡ ಪೇಡ’ ಸ್ವಾದಿಷ್ಟಕ್ಕೆ ಕಾರಣವಾಗಿರುವ ಧಾರವಾಡ ಎಮ್ಮೆಗೆ ಈಗ  “ತಳಿ ಮಾನ್ಯತೆ’  ಹಿರಿಮೆ ಸಿಕ್ಕಿದೆ.ಇದು ದೇಶದಲ್ಲಿ ಗುರುತಿಸಲಾದ ಎಮ್ಮೆ ತಳಿಗಳ ಪಟ್ಟಿಗೆ 18ನೇ ತಳಿಯಾಗಿ ಸೇರ್ಪಡೆಯಾಗಿದೆ.

Advertisement

“ತಳಿ ಮಾನ್ಯತೆ’ ಪಟ್ಟಿಗೆ ಸೇರ್ಪಡೆಯಾದ ಕರ್ನಾ ಟಕ ಏಕೈಕ ತಳಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹರಿಯಾಣದ ರಾಷ್ಟ್ರೀಯ ಪಶು ಆನುವಂಶಿಕ ಸಂಸಾಧನ ಬ್ಯೂರೋದಿಂದ ಸೆ.3ರಂದು ಧಾರವಾಡ ಎಮ್ಮೆ ತಳಿಗೆ INDIA_BUFFALO_ 0800_DHARWADI_01018 ನೋಂದಣಿ ಸಂಖ್ಯೆ ನೀಡಿದೆ.

ಅಧ್ಯಯನ ನಡೆಸಿದ್ದು ಹೇಗೆ? :

ಉತ್ತರ ಕರ್ನಾಟಕದ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ದ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ| ವಿ.ಎಸ್‌. ಕುಲಕರ್ಣಿ ನೇತೃತ್ವದಲ್ಲಿ 3,937 ರೈತರ ಬಳಿ ಇರುವ 10,650 ಧಾರವಾಡ ಎಮ್ಮೆಗಳ ಬಗ್ಗೆ ಅಧ್ಯಯನ ಕೈಗೊಂಡು ಅಂತಿಮ ವರದಿ ಸಿದ್ಧಪಡಿಸಲಾಗಿತ್ತು.  ಸೆ.3ರಂದು ತಳಿ ನೋಂದಣಿ  ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ.

ಅಧ್ಯಯನ ವರದಿಯಲ್ಲೇನಿದೆ? :

Advertisement

2012ರ ಜಾನುವಾರು ಗಣತಿ ಪ್ರಕಾರ ಈ ನಾಲ್ಕು ಜಿಲ್ಲೆಗಳಲ್ಲಿ 12.05 ಲಕ್ಷ ಎಮ್ಮೆಗಳಿದ್ದು, ಈ ಪೈಕಿ ಶೇ.80ರಷ್ಟು ಧಾರವಾಡ ಎಮ್ಮೆಗಳೇ ಇರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಎಮ್ಮೆಗಳ ಅಳತೆ, ಆಕಾರ, ಗುಣಧರ್ಮಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಎಮ್ಮೆಗಳ ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಸಾಮರ್ಥ್ಯ ಶಕ್ತಿ ಪರೀಕ್ಷೆಯನ್ನೂ  ಮಾಡಲಾಗಿದೆ.   ಇವು ವರ್ಷದ 335 ದಿನ ಹಾಲು ಕೊಡುತ್ತಿದೆ. ಈ ಹಾಲಿನಲ್ಲಿ ಶೇ.7ರಷ್ಟು ಕೊಬ್ಬಿನಾಂಶ ಇದ್ದು, ಕೊಬ್ಬು ರಹಿತ ಉತ್ಪನ್ನಗಳಲ್ಲಿ ಶೇ.9.5ರಷ್ಟು ಇದೆ ಎಂಬುದನ್ನು ಅಧ್ಯಯನದಲ್ಲಿ ದಾಖಲಿಸಲಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಎಮ್ಮೆ ಗಳಿವೆ. ಆದರೆ ಈವರೆಗೆ ಯಾವುದೇ ತಳಿಗೆ ಸ್ಥಾನಮಾನ ಸಿಕ್ಕಿರಲಿಲ್ಲ. ಈಗ ದೇಶದ 18ನೇ ಎಮ್ಮೆ ತಳಿ ಯಾಗಿ ಧಾರವಾಡ ಎಮ್ಮೆ ಘೋಷಣೆಯಾಗಿದೆ. ಇದು  ಐತಿಹಾಸಿಕ ಸಾಧನೆ ಆಗಿದ್ದು, ಖುಷಿ ಉಂಟು ಮಾಡಿದೆ.- ವಿ.ಎಸ್‌.ಕುಲಕರ್ಣಿ,   ಕೃಷಿ ವಿವಿ ಪ್ರಾಣಿ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next