Advertisement
ಇಲ್ಲಿಯ ಮುರುಘಾಮಠದಲ್ಲಿ ನಡೆದ ಪತ್ರಿಕಾಗೋಷ್ಠಿ ಈ ವಿಷಯ ತಿಳಿಸಿದ ಶ್ರೀಗಳು, ಇಲ್ಲಿಯ ಮುರುಘಾಮಠದಲ್ಲಿ ನೆಲೆಸಿರುವ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ 94 ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಕೊಡಲಾಗುವ ಪ್ರಸಕ್ತ ಸಾಲಿನ ಪ್ರಶಸ್ತಿ ಇದಾಗಿದ್ದು, 10 ಗ್ರಾಂ ಚಿನ್ನದ ಫಲಕ, 25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಫೆ.13 ರಂದು ಸಂಜೆ 7:00 ಗಂಟೆಗೆ ಪ್ರಶಸ್ತಿ ಪ್ರದಾನ ನೆರವೇರಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
Related Articles
Advertisement
ಇಳಕಲ್ ಶ್ರೀ ಗುರು ಮಹಾಂತ ಸ್ವಾಮಿಜಿ ಸಾನಿಧ್ಯದಲ್ಲಿ ಶ್ರೀ ಗುರುಬಸವಲಿಂಗ ಸ್ವಾಮಿಜಿ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಶಿವಲೀಲಾ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ, ಉದ್ಯಮಿ ವಿಜಯ ಸಂಕೇಶ್ವರ, ಬಾಬಾಸಾಹೇಬ ಪಾಟೀಲ, ಈಶ್ವರ ಉಳ್ಳಾಗಡ್ಡಿ, ಸಿದ್ದನಗೌಡ ಪಾಟೀಲ ಅತಿಥಿಯಾಗಿ ಭಾಗವಹಿಸುವರು. ಬಿ.ವಿ.ಚಿಕ್ಕಮಠ ಇವರನ್ನು ಸನ್ಮಾನಿಸಲಾಗುವುದು ಎಂದರು.
ಫೆ.11 ರಂದು ಸಂಜೆ 7 ಕ್ಕೆ ಶಿವಾನುಭವ ಚಿಂಥನ-1 ಸಾನಿಧ್ಯವನ್ನು ಶ್ರೀ ಶಿವಬಸವ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಚನ್ನಬಸವ ಸ್ವಾಮಿಜಿ ಸಮ್ಮುಖವಹಿಸುವರು. ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಡಾ.ವೀಣಾ ಬಿರಾದಾರ ಉಪನ್ಯಾಸ ನೀಡುವರು, ಶಾಸಕರಾದ ಎಂ.ಆರ್.ಪಾಟೀಲ, ಪ್ರಸಾದ ಅಬ್ಬಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ಡಾ.ನಿರ್ಮಲಾ ಎಲಿಗಾರ. ಡಾ.ಶಂಕರ ಶಿರೂರ, ರಾಜಶೇಖರ ಕಂಪ್ಲಿ ಅವರನ್ನು ಸನ್ಮಾನಿಸಲಾಗುವದು ಎಂದರು.
ಜ.12 ಸಂಜೆ 07 ಕ್ಕೆ ನಿಡಸೂಸಿ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಶಿವಾನುಭವ ಚಿಂಥನ 2 ನಡೆಯಲಿದೆ. ಶ್ರೀ ನೀಲಕಂಠ ಸ್ವಾಮಿಜಿ ಸಮ್ಮುಖದಲ್ಲಿ ಶಿವಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಗುವುದು. ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಜಾನಪದದಲ್ಲಿ ಶರಣರು ಕುರಿತು ಪ್ರೊ. ಶಕುಂತಲಾ ಸಿಂಧೂರ ಉಪನ್ಯಾಸ ನೀಡುವರು. ಮಾಜಿ ಮಂತ್ರಿ ಜಗದೀಶ ಶೆಟ್ಟರ, ಮಹಾಪೌರ ವೀಣಾ ಭಾರದ್ವಾಡ ಅತಿಥಿಯಾಗಿ ಪಾಲ್ಗೊಳ್ಳುವರು.
ಫೆ.14 ರಂದು ಬೆಳಿಗ್ಗೆ 04 ಗಂಟೆಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ಚನ್ನಬಸವ ಸ್ವಾಮಿಜಿ ಸಾನಿಧ್ಯವಹಿಸುವರು ವಿವಿಧ ಮಠಾಧೀಶರು ಉಪಸ್ಥಿತರಿರುವರು. ಸಂಜೆ 4 ಕ್ಕೆ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು, ವಿವಿಧ ಮಠಾಧೀಶರು ಸಮ್ಮುಖವಹಿಸುವರು. ಈ ಸಮಾರಂಭದಲ್ಲಿ ಶ್ರದ್ಧಾಭಕ್ತಿಯಿಂದ ಸಕಲ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.