Advertisement

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಇಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ

11:57 PM Mar 26, 2023 | Team Udayavani |

ಕೊಂಚ ನಗರ ಪ್ರದೇಶ ಮತ್ತ ಭಾಗಶಃ ಗ್ರಾಮಾಂತರ ಪ್ರದೇಶ ವ್ಯಾಪ್ತಿ ಪಡೆದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಪಾಳೆಗಾರರ ಫೈಟ್‌ನಿಂದ ರಾಜ್ಯದ ಗಮನ ಸೆಳೆದ ಕ್ಷೇತ್ರ. ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಮಧ್ಯದ ಫೈಟ್‌ನಿಂದ ಸುದ್ದಿಯಾಗಿದ್ದ ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದ ಉದಾಹರಣೆಯೇ ಇಲ್ಲ.

Advertisement

ಬಾಬುರಾವ್‌ ದೇಶಪಾಂಡೆ ಅವರಿಂದ ಹಿಡಿದು ಬಾಬಾಗೌಡ ಪಾಟೀಲವರೆಗೆ, ಪ್ರೊ|ಎಂ.ಡಿ.ನಂಜುಂಡಸ್ವಾಮಿ ಅವರಿಂದ ಹಿಡಿದು ಶ್ರೀಕಾಂತ ಅಂಬಡಗಟ್ಟಿವರೆಗೆ ಅಷ್ಟೆಯಲ್ಲ, 2008ರಿಂದ ಈಚೇಗೆ ಕ್ಷೇತ್ರ ಪುನರ್‌ವಿಂಗಡಣೆ ಅನಂತರ ನಡೆದ ಮೂರು ಚುನಾವಣೆಯಲ್ಲೂ ಇದು ನಡೆದುಕೊಂಡು ಬಂದಿದೆ.

2008ರಲ್ಲಿ ಬಿಜೆಪಿಯಿಂದ ಸೀಮಾ ಮಸೂತಿ ಗೆಲುವು ಸಾಧಿಸಿದರೆ, 2013ರಲ್ಲಿ ವಿನಯ ಕುಲಕರ್ಣಿ ಹಾಗೂ 2018ರಲ್ಲಿ ಅಮೃತ ದೇಸಾಯಿ ಗೆಲುವು ಸಾಧಿಸಿದ್ದಾರೆ. ಪ್ರತೀ ಬಾರಿಯೂ ಈ ಕ್ಷೇತ್ರದ ಜನತೆಯ ತೀರ್ಮಾನ ಸದಾ ಹೊಸತನದತ್ತ ತುಡಿಯುತ್ತದೆ. ಇನ್ನೊಂದೆಡೆ ಈ ಕ್ಷೇತ್ರದ ಯುವಶಕ್ತಿ ಸದಾ ಹೊಸ ಅಭ್ಯರ್ಥಿಗಳ ಬೆನ್ನು ತಟ್ಟುತ್ತಲೇ ಬಂದಿದ್ದಾರೆ. ಈ ಬಾರಿ ಎರಡೂ ಪಕ್ಷಗಳಿಂದ ಅಭ್ಯರ್ಥಿಗಳ ಅಖೈರು ಆಗಿಲ್ಲ. ಈ ಬಾರಿಯೂ ಜನ ಬದಲಾವಣೆ ಬಯಸುತ್ತಾರಾ ಇಲ್ಲವೇ ಹಳೆಯ ನಾಯಕನಿಗೆ ಮಣೆ ಹಾಕುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next