Advertisement

7 ಫೀವರ್‌ ಕ್ಲಿನಿಕ್‌ಗಳಿಗೆ ಶೆಟ್ಟರ್‌ ಭೇಟಿ

12:04 PM Apr 13, 2020 | Naveen |

ಧಾರವಾಡ: ಕೊರೊನಾ ಮುಂಜಾಗೃತಾ ಕ್ರಮವಾಗಿ ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವ ಅವಶ್ಯಕತೆಯನ್ನು ಮನಗಂಡಿರುವ ಸರ್ಕಾರ ರಾಷ್ಟ್ರೀಯ
ನಗರ ಆರೋಗ್ಯ ಅಭಿಯಾನದಡಿಯಲ್ಲಿ ಸ್ಥಾಪಿಸಿರುವ ಫೀವರ್‌ ಕ್ಲಿನಿಕ್‌ಗಳ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್‌ ಶನಿವಾರ ಪರಿಶೀಲಿಸಿದರು.

Advertisement

ತೇಜಸ್ವಿ ನಗರದ ಪುರೋಹಿತ ನಗರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಫೀವರ್‌ ಕ್ಲಿನಿಕ್‌ಗಳ ಕಾರ್ಯವಿಧಾನ ಪರಿಶೀಲಿಸಿದರು.
ಜಿಲ್ಲಾ ಧಿಕಾರಿ ದೀಪಾ ಚೋಳನ್‌ ಮಾತನಾಡಿ, ಫೀವರ್‌ ಕ್ಲಿನಿಕ್‌ ಗಳನ್ನಾಗಿ ಮಾರ್ಪಡಿಸಿದ ನಗರ ಆರೋಗ್ಯ ಕೇಂದ್ರಗಳಲ್ಲಿ ನೋವಲ್‌ ಕೊರೊನಾ ಸೋಂಕಿನ ಲಕ್ಷಣವಿರುವ ಸಾರ್ವಜನಿಕರಿಗೆ ಪ್ರತ್ಯೇಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಮಾನವ ಸಂಪನ್ಮೂಲದಿಂದ ಫೀವರ್‌ ಕ್ಲಿನಿಕ್‌ಗಳನ್ನು ನಡೆಸಲಾಗುತ್ತದೆ.

ಫೀವರ್‌ ಕ್ಲಿನಿಕ್‌ಗೆ ಅವಶ್ಯಕವಾದ ಆರೋಗ್ಯ ಸಲಕರಣೆ ಮತ್ತು ಸಾಮಗ್ರಿಗಳಾದ ಥರ್ಮಲ್‌ ಸ್ಕ್ಯಾನರ್‌, ಎನ್‌- 95 ಮಾಸ್ಕ್, ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಸುರûಾ ಕವಚಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಅನುದಾನದಲ್ಲಿ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ್‌ ಮದೀನಕರ್‌ ಮಾತನಾಡಿ, ಧಾರವಾಡದ ಜಿಲ್ಲಾಸ್ಪತ್ರೆ, ಮದಾರಮಡ್ಡಿ, ಬಾರಾಕೋಟ್ರಿ, ಪುರೋಹಿತ ನಗರ, ಹುಬ್ಬಳ್ಳಿಯ ಕಿಮ್ಸ್‌, ಚಿಟಗುಪ್ಪಿ ಸಾರ್ವಜನಿಕ ಆಸ್ಪತ್ರೆ ಸೇರಿ ಒಟ್ಟು 7 ಕಡೆಗಳಲ್ಲಿ ಫೀವರ್‌ ಕ್ಲಿನಿಕ್‌ ಗಳನ್ನು ಸ್ಥಾಪಿಸಲಾಗಿದೆ. ಫೀವರ್‌ ಕ್ಲಿನಿಕ್‌ ಗಳ ನಿರ್ದಿಷ್ಟ ಮಾರ್ಗಸೂಚಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ನೀಡಿದ್ದಾರೆ ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ|ಎಸ್‌.ಎಂ. ಹೊನಕೇರಿ ಮಾತನಾಡಿ, ಫೀವರ್‌ ಕ್ಲಿನಿಕ್‌ಗಳಲ್ಲಿ ಉಪಯೋಗಿಸಿದ ಮಾಸ್ಕ್, ಗ್ಲೌಸ್‌ ಹಾಗೂ ಇತರೆ ವಸ್ತುಗಳನ್ನು ಎಚ್ಚರಿಕೆಯಿಂದ ಜೈವಿಕ ವೈದ್ಯಕೀಯ ತಾಜ್ಯ ನಿರ್ವಹಣೆ ಕಾಯ್ದೆ ಅನ್ವಯ ವಿಲೇವಾರಿ ಮಾಡಲಾಗುವುದು.ಆಪ್ತ ಸಮಾಲೋಚನೆ ಮತ್ತು ಐಇಸಿ ಚಟುವಟಿಕೆ ನಡೆಸಲಾಗುವುದು. ಖಾಸಗಿ ಕ್ಲಿನಿಕ್‌, ಆಸ್ಪತ್ರೆಗಳು ಫೀವರ್‌ ಕ್ಲಿನಿಕ್‌ ಗಳಾಗಿ ಕಾರ್ಯ ನಿರ್ವಹಿಸಲು ಇಚ್ಚಿಸಿದಲ್ಲಿ ಹೆಸರು ನೊಂದಾಯಿಸಿ ಅವರಿಗೆ ಅವಶ್ಯ ತರಬೇತಿ ನೀಡಿ ಅವಕಾಶ ಕಲ್ಪಿಸಲಾಗುವುದೆಂದು ಸಚಿವರಿಗೆ ಮಾಹಿತಿ ನೀಡಿದರು. ಸಚಿವ ಶೆಟ್ಟರ್‌ ಅವರು ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವ ಕೊಠಡಿ, ಲಸಿಕಾ ಕೊಠಡಿ ಹಾಗೂ ಔಷಧ ಸಂಗ್ರಹಣೆ, ಪ್ರಯೋಗಾಲಯಗಳಿಗೂ ಭೇಟಿ ನೀಡಿ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ| ಪರಶುರಾಮ ಎಫ್‌. ಕೆ.ಸೇರಿದಂತೆ ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next