Advertisement

ಧಾರವಾಡ ಕಟ್ಟಡ ದುರಂತ: 13ಕ್ಕೇರಿದ ಮೃತರ ಸಂಖ್ಯೆ

12:30 AM Mar 22, 2019 | Team Udayavani |

ಧಾರವಾಡ: ಬಹುಮಹಡಿ ಕಟ್ಟಡ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೇರಿದ್ದು, ಗುರುವಾರ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಇನ್ನೂ ಎರಡು ದಿನ ಕಾಲ ಕಾರ್ಯಾಚರಣೆ ಮುಂದುವರಿಯುವ ನಿರೀಕ್ಷೆ ಇದ್ದು, ಈಗ ಕಟ್ಟಡದ ಅವಶೇಷಗಳನ್ನು ದೈತ್ಯ ಯಂತ್ರಗಳಿಂದ ಒಡೆದು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ. ಗುರುವಾರ ಏಳು ಶವಗಳನ್ನು ಹೊರತೆಗೆಯಲಾಗಿದೆ.

Advertisement

ಗುರುವಾರ ರಾತ್ರಿವರೆಗೂ ಒಟ್ಟು 13 ಜನ ಮೃತಪಟ್ಟಿದ್ದನ್ನು ಜಿಲ್ಲಾಧಿಕಾರಿಗಳು ದೃಢಪಡಿಸಿದ್ದು, ಕಟ್ಟಡದ ಅವಶೇಷಗಳಡಿ ಇನ್ನೂ 20 ಜನರು ಇರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಮಧ್ಯೆ, ಕಟ್ಟಡ ದುರಂತ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು  ಗುರುವಾರ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು. 

ಅನಂತರ ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರ ಸಂಬಂಧಿಗಳನ್ನು ಭೇಟಿ ಮಾಡಿ ಧೈರ್ಯ 
ಹೇಳಿದರು. ಮೃತರ ಕುಟುಂಬ ಸದಸ್ಯರಿಗೆ ಸರಕಾರದಿಂದ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಂಪೂರ್ಣ  ಅಧಿಕಾರ ಕೊಟ್ಟಿದ್ದು, ಈ ಬಗ್ಗೆ ಚಿಂತೆ ಬೇಡ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next