Advertisement
ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಬಿಜೆಪಿ ವರಿಷ್ಠರು ಮಣೆ ಹಾಕದೇ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೆ ಈ ಸಲವೂ ಟಿಕೆಟ್ ನೀಡಿದ್ದರಿಂದ ಅಷ್ಟಗಿ ಮುನಿಸಿಕೊಂಡಿದ್ದರು.
Related Articles
ಬೆಳೆಯುತ್ತಾರೆ ಎಂದರು.
Advertisement
ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ತವನಪ್ಪ ಅಷ್ಟಗಿ, ಬಿಜೆಪಿಯಲ್ಲಿ ನಮಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ. ನಮ್ಮ ಗೌರವಕ್ಕೆ ಧಕ್ಕೆ ಬರುವ ಕೆಲಸವನ್ನು ಹಾಲಿ ಶಾಸಕ ಅಮೃತ ದೇಸಾಯಿ ಮಾಡಿದರು. ಆರು ಬಾರಿ ಸೋತವರನ್ನು ನಾವು ಶಾಸಕರನ್ನಾಗಿ ಮಾಡಿದೇವು. ತನು, ಮನ, ಧನದಿಂದ ಕಾರ್ಯಕರ್ತರೆಲ್ಲ ಸೇರಿ ಅವರನ್ನು ಆಯ್ಕೆ ಮಾಡಿದ್ದೆವು. ಆದರೆ, ಅಮೃತ ದೇಸಾಯಿ ಕಾರ್ಯಕರ್ತರನ್ನೂ ಕಡೆಗಣಿಸಿದರು ಎಂದು ದೂರಿದರು.
ಬಿಜೆಪಿಯಲ್ಲಿ ಒಂದು ವಿಶ್ವಾಸ ಮೇಲೆ ಇದ್ದೆ. ಆದರೆ, ಅಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ. ಇದೀಗ ಸತೀಶ ಜಾರಕಿಹೊಳಿ ಅವರು ನಮ್ಮ ಮನೆಗೆ ಬಂದು ಮನವೊಲಿಸಿ, ನಮಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರಿಂದ ನಾನು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಸೋಮವಾರ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ನ್ಯಾಯದ ವಿಶ್ವಾಸದಿಂದ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ವಿಽಸಿಲ್ಲ. ಗೌರವ ಬಯಸಿ, ಬಂದಿದ್ದೇನೆ. ಮೊದಲು ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ಆ ಬಳಿಕ ಕೆಜೆಪಿ, ಬಿಜೆಪಿ ಸೇರ್ಪಡೆಗೊಂಡಿದ್ದೆ. ಈಗ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ.-ತವನಪ್ಪ ಅಷ್ಟಗಿ ಬಿಜೆಪಿ ಪಕ್ಷವನ್ನು ತೊರೆದು ತವನಪ್ಪ ಅಷ್ಟಗಿ ಅಽಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಅವರ ಶಕ್ತಿಗನುಗುಣವಾಗಿ ಅವರಿಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುವುದು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಅವರು ಸೋಮವಾರ ಅದನ್ನು ವಾಪಸ್ ಪಡೆದು ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಲ್ಲುತ್ತಾರೆ.
-ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಅಷ್ಟಗಿಗೆ ಬೆಲ್ಲದ ಟಾಂಗ್
ತವನಪ್ಪ ಅಷ್ಟಗಿ ಮೂಲತ: ವ್ಯಾಪಾರಿಯಾಗಿದ್ದು, ಲಾಭದ ಆಸೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೆ ಅವರು ಅಲ್ಲಿ ನಷ್ಟವನ್ನೇ ಅನುಭವಿಸಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷ, ಅದರ ನಾಯಕ ಅವರೊಂದಿಗೆ ಹಾಗೂ ಅವರ ಪತ್ನಿ ಜತೆಗೆ ಯಾವ ರೀತಿ ನಡೆದುಕೊಂಡಿತ್ತು ಎಂಬುದನ್ನು ಮರೆತಿದ್ದಾರೆ ಅಷ್ಟಗಿ. ಸ್ವಾಭಿಮಾನಿಯಾಗಿದ್ದರೆ ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿರಲಿಲ್ಲ. ಅವರಿಗೆ ತತ್ವ, ಸಿದ್ದಾಂತವಿಲ್ಲ.
-ಅರವಿಂದ ಬೆಲ್ಲದ, ಶಾಸಕ