Advertisement

ಧಾರವಾಡ: ದೇಶದ ರಾಜಕೀಯದಲ್ಲಿ ಮಹಿಳೆಗೆ ಮಹತ್ವದ ಸ್ಥಾನ

05:27 PM Mar 18, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಕವಿವಿ ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಮಹಿಳಾ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ವೇಗದ ಪ್ರಗತಿಯಲ್ಲಿ ಸ್ಫೂರ್ತಿದಾಯಕ ಮಹಿಳೆಯರು’ ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಸಮಾರೋಪಗೊಂಡಿತು.

Advertisement

ವಿಚಾರ ಸಂಕಿರಣದಲ್ಲಿ ವಿವಿಧ ವಿಷಯಗಳ ಕುರಿತು 62 ಸಂಶೋಧಕರು ಪ್ರಬಂಧ ಮಂಡಿಸಿದರು. ಉತ್ತಮ ಪ್ರಬಂಧ ಮಂಡನೆಗೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ-ಪ್ರಮಾಣಪತ್ರ ವಿತರಿಸಲಾಯಿತು.

ಕರ್ನಾಟಕ ಕಾನೂನು ವಿವಿ ಹಿರಿಯ ಪ್ರಾಧ್ಯಾಪಕಿ ಡಾ| ರತ್ನಾ ಭರಮಗೌಡರ ಮಾತನಾಡಿ, ಭಾರತೀಯ ರಾಜಕೀಯದಲ್ಲಿ ಮಹಿಳೆಗೆ ಮಹತ್ವದ ಸ್ಥಾನಮಾನಗಳನ್ನು ನೀಡಲಾಗಿದೆ. ಇತಿಹಾಸವನ್ನು ಅವಲೋಕಿಸಿದಾಗ ಅನೇಕ ಮಹಿಳೆಯರು ರಾಜಕೀಯದಲ್ಲಿ ಸಾಧನೆ ಮಾಡಿದ್ದು, ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಸಾಮರ್ಥ್ಯ ಹೊಂದಿದ್ದಾಳೆ ಎಂಬುದಕ್ಕೆ ಇಂದಿರಾಗಾಂಧಿ, ಪ್ರತಿಭಾ ಪಾಟೀಲ್‌, ದ್ರೌಪದಿ ಮುರ್ಮು, ನಿರ್ಮಲಾ ಸೀತಾರಾಮನ್‌ ಸೇರಿದಂತೆ ಇಂದು ರಾಜಕೀಯ ಕ್ಷೇತ್ರದಲ್ಲಿ
ಬಹಳಷ್ಟು ಸಾಧನೆ ಮಾಡಿದ್ದಾರೆ ಎಂದರು. ಕ್ರೀಡಾ ಕ್ಷೇತ್ರ ಪುರುಷರಿಗೆ ಮಾತ್ರ ಸೀಮಿತವಾಗಿತ್ತು.

ಆದರೆ ಪ್ರಸ್ತುತ ಮಹಿಳೆಯರು ಕ್ರೀಡೆ, ಆಡಳಿತ, ಪೊಲೀಸ್‌ ಇಲಾಖೆ, ರಕ್ಷಣಾ ಇಲಾಖೆಯಲ್ಲೂ ಸಾಧನೆ ಮಾಡಿದ್ದಾರೆ. ಆದರೆ ಇಂದಿಗೂ ಮಹಿಳೆಯರ ಮೇಲೆ ಅವ್ಯಾಹತವಾಗಿ ಮಾನಸಿಕ ಹಿಂಸೆ ನಡೆಯುತ್ತಿರುವುದು ದುರದೃಷ್ಟಕರ. ಮಹಿಳೆಯರು ಎಷ್ಟೇ ಮುಂದುವರಿದಿದ್ದರೂ ಅವಳ ಸಾಧನೆಯನ್ನು ಗುರುತಿಸದಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಎಸ್‌ಬಿಐ ಕವಿವಿ ಶಾಖೆಯ ಮಧುಸ್ವಿನಿ ದೇಸಾಯಿ ಮಾತನಾಡಿದರು. ಕವಿವಿ ಸಮಾಜ ನಿಖಾಯದ ಡೀನ್‌ ಜಯಶ್ರೀ ಎಸ್‌. ಅಧ್ಯಕ್ಷತೆ ವಹಿಸಿದ್ದರು. ಕವಿವಿ ಮಹಿಳಾ ಅಧ್ಯಯನ ಸಂಶೋಧನೆ ಕೇಂದ್ರದ ನಿರ್ದೇಶಕಿ ಡಾ| ಸಂಗೀತಾ ಮಾನೆ ವರದಿ ಮಂಡಿಸಿದರು. ಶ್ಯಾಮಲಾ ರತ್ನಾಕರ, ಡಾ| ಶ್ಯಾಮಕುಮಾರ, ವೀಣಾ ಬಿರಾದರ, ಡಾ| ಪುಷ್ಪಾ ಹೊಂಗಲದ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next