Advertisement
ಧಾರವಾಡ-ಹುಬ್ಬಳ್ಳಿ ಮಾತ್ರವಲ್ಲ ಉತ್ತರ ಕರ್ನಾಟಕ ಸೇರಿ ರಾಜಧಾನಿ ಬೆಂಗಳೂರಿನಲ್ಲಿಯೂ ಅತೀ ದೊಡ್ಡ ಮಳಿಗೆಗಳುತಲೆ ಎತ್ತುತ್ತಿದ್ದು, ಫ್ರಾಂಚೈಸಿ ಅಂಗಡಿಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಹೀಗಾಗಿ ಪೇಢಾ ಉತ್ಪಾದನೆ ಮತ್ತು ಮಾರಾಟ ಅತ್ಯಂತ ಉತ್ತುಂಗದ ಸ್ಥಿತಿ ತಲುಪಿದೆ. ವರ್ಷದಿಂದ ವರ್ಷಕ್ಕೆ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ.
Related Articles
ಪೇಢಾ ಮಾರಾಟ ಹೆಚ್ಚಳವಾಗಿದೆ.
Advertisement
ಇನ್ನೊಂದೆಡೆ ಪೇಢಾ ಉದ್ಯಮಕ್ಕೆ ಭಾರಿ ಏಟು ಕೊಟ್ಟಿರುವ ವಿದೇಶಿ ಬುಕ್ಕಿಂಗ್‌ಗಳು ಸದ್ಯಕ್ಕೆ ಶೂನ್ಯವಾಗಿವೆ. ಕೊರೊನಾದಿಂದವಿಶ್ವದ ಪ್ರಮುಖ ದೇಶಗಳ ಸಂಪರ್ಕ ಕಡಿತಗೊಂಡಿದ್ದು, ಪೇಢಾ ಸಾಗಾಟ ಸಂಪೂರ್ಣ ನಿಂತು ಹೋಗಿದೆ. ಹೀಗಾಗಿ ವಿದೇಶಿ
ವಿನಿಮಯ ತಂದು ಕೊಡುತ್ತಿದ್ದ ಪೇಢಾ ಬರೀ ರೂಪಾಯಿಗೆ ಸೀಮಿತವಾಗಿದೆ. 2017-19ರ ವರೆಗೆ ಮೂರು ವರ್ಷದಲ್ಲಿ 7500 ಕೆಜಿಯಷ್ಟು ಪೇಢಾ ವಿದೇಶಗಳಲ್ಲಿ ಮಾರಾಟವಾಗಿತ್ತು.ಕಳೆದ ವರ್ಷವಂತೂ ವಿದೇಶಿ ಕಂಪನಿಗಳಿಂದಲೂ ಪೇಢಾಕ್ಕೆ ಬೇಡಿಕೆಗಳು ಆರಂಭಗೊಂಡಿದ್ದವು. ಆದರೆ ಕೊರೊನಾದಿಂದಾಗಿ ಮತ್ತೆ ಪೇಢಾ ವಿದೇಶಕ್ಕೆ ಹೋಗುತ್ತಿಲ್ಲ. ಅಮೆರಿಕದವರ ಕಣ್ಣು
ಅಮೆರಿಕ ಮೂಲದ ಆಹಾರ ಕಂಪನಿಯೊಂದು ಮಿಶ್ರಾ ಪೇಢಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದ ವಿವಿಧೆಡೆ ಸಿದ್ಧಗೊಳ್ಳುವ ಪೇಢಾ ಪರೀಕ್ಷಿಸಿ ಅಂತಿಮವಾಗಿ ಧಾರವಾಡದ ಮಿಶ್ರಾ ಫೇಡಾ ಮೆಚ್ಚಿಕೊಂಡು ಇಲ್ಲಿಯೇ ಉದ್ಯಮ ಸ್ಥಾಪಿಸಲು
ಈ ಕಂಪನಿ ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಉದ್ಯಮ ಆರಂಭಗೊಂಡಿಲ್ಲ. ವಿದೇಶಿಯರು ನೇರವಾಗಿ ಪೇಢಾ ಉದ್ಯಮದಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷ ಕೊರೊನಾದಿಂದ ಪೇಢಾ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ವರ್ಷ ಅತ್ಯಂತ ಉತ್ತಮವಾಗಿ ಪೇಢಾ ಮಾರಾಟವಾಗಿದೆ. ತಿಂದವರಿಗೂ ಉತ್ತಮ ಪೇಢಾ ಸಿಕ್ಕಿದೆ, ಉದ್ಯಮಿಗಳಿಗೂ ವ್ಯಾಪಾರವಾಗಿದೆ.
ಸತ್ಯಂ ಮಿಶ್ರಾ, ಮಿಶ್ರಾ ಪೇಢಾ ಮುಖ್ಯಸ್ಥರು ರಾಜ್ಯದ ವಿವಿಧ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆಯಾಗಿ ಪೇಢಾ ಕೊಡುವ ಪದ್ಧತಿ ಬೆಳೆಯುತ್ತಿದ್ದು, ಈ ವರ್ಷ ರಾಜ್ಯದ 75 ಹಾಗೂ ಹೊರ ರಾಜ್ಯದ 24 ಕಂಪನಿಗಳಿಗೆ ಪೇಢಾ ಪೂರೈಸಿದ್ದೇವೆ.
ಅಮಿತ್, ಪೇಢಾ ವ್ಯಾಪಾರಿ, ಧಾರವಾಡ *ಬಸವರಾಜ ಹೊಂಗಲ್