Advertisement

Udupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ

04:49 PM Sep 16, 2024 | Team Udayavani |

ಉಡುಪಿ: ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕರಾವಳಿ ಜಿಲ್ಲೆಯಾದ ಉಡುಪಿಯ ಶಾಸಕರು ಮತ್ತು ಸಂಸದರು ಕಿಡಿಕಾರಿದ್ದಾರೆ. ಸರ್ಕಾರವು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಐದು ಮಂದಿ ಶಾಸಕರು ಮತ್ತು ಸಂಸದರು ಆರೋಪಿಸಿದ್ದಾರೆ.

Advertisement

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾರ್ಕಳ ಶಾಸಕ ವಿ ಸುನೀಲ್‌ ಕುಮಾರ್‌, ಉಡುಪಿ ಶಾಸಕ ಯಶಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ‌ ಹಾಗೂ ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ಜಂಟಿಯಾಗಿ ಉಡುಪಿಯಲ್ಲಿ ಸೋಮವಾರ (ಸೆ.16) ಸುದ್ದಿಗೋಷ್ಟಿ ನಡೆಸಿದರು.

ಮಾತನಾಡಿದ ಮಾಜಿ ಸಚಿವ, ಶಾಸಕ ಸುನೀಲ್‌ ಕುಮಾರ್‌, ಎರಡು ಬಜೆಟ್ ನಲ್ಲಿ ಉಡುಪಿಗೆ ಯಾವುದೇ ಯೋಜನೆ ನೀಡಿಲ್ಲ. ಜಿಲ್ಲಾಡಳಿತ 240 ಕೋಟಿ ಮಳೆಹಾನಿ ಹೇಳಿದೆ. ಸರ್ಕಾರ ದಿವಾಳಿಯಾಗಿದೆ. ಒಂದು ಪೈಸೆ ಹಣವೂ ಬಿಡುಗಡೆ ಮಾಡಿಲ್ಲ. ಇದು ಕರಾವಳಿಯ ನಿರ್ಲಕ್ಷ್ಯವಲ್ಲದೆ ಮತ್ತಿನ್ನೇನು? ಐದು ಜನ ಬಿಜೆಪಿ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿಲ್ಲ ಎಂದರು.

ಧರಣಿ ಎಚ್ಚರಿಕೆ

ತಾಲೂಕು ಮಟ್ಟದ ಅಧಿಕಾರಿಗಳ ನಿರಂತರ ವರ್ಗಾವಣೆ ಮಾಡಲಾಗುತ್ತಿದೆ. ಶಾಸಕರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಸಹಕಾರ ನೀಡುತ್ತಿದ್ದಾರೆ.  ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ನಮ್ಮ ಬೇಡಿಕೆ ನೀಡಿದ್ದೇವೆ. ಈ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕರಾವಳಿಯ ನಿರ್ಲಕ್ಷ ಮುಂದುವರಿಸಬಾರದು, ಸಮಸ್ಯೆಗಳನ್ನು 10 ದಿನದೊಳಗೆ ಸರಿಪಡಿಸಬೇಕು, ಅನುದಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂಡುವುದಾಗಿ ಎಚ್ಚರಿಸಿದರು.

Advertisement

ಗ್ರಾಮೀಣ ರಸ್ತೆಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ರಸ್ತೆಗಳ ಪ್ಯಾಚ್ ವರ್ಕ್ ಗೂ ಹಣ ನೀಡಿಲ್ಲ. ಹತ್ತು ದಿನದಲ್ಲಿ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಮೊದಲನೇ ಹಂತದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುತ್ತೇವೆ. ಎರಡನೇ ಹಂತದಲ್ಲಿ ಎರಡು ಜಿಲ್ಲೆಗಳಲ್ಲಿ ಜನಾಂದೋಲನ ಮಾಡಲಾಗುವುದು ಎಂದರು.

ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳ ನಂತರ ಬೆಲೆ ಏರಿಕೆ ಹೆಚ್ಚಳವಾಗುತ್ತಿದೆ. ಈಗ ಬೆಲೆ ಏರಿಕೆ ಪರ್ವ ಮುಗಿದಿದೆ. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಸರ್ಕಾರವು 11 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ತಯಾರಿ ಮಾಡಲಾಗಿದೆ. ಉಡುಪಿಯಲ್ಲಿ 40,000 ಬಿಪಿಎಲ್ ಕಾರ್ಡ್ ರದ್ದತಿಗೆ ತಯಾರಿ ಮಾಡಿದೆ. ಗ್ಯಾರಂಟಿ ಯೋಜನೆ ತಲುಪಿಸಲಾಗದ ಅಸಹಾಯಕತೆಗೆ ಈ ಪದ್ಧತಿ ಅನುಸರಿಸುತ್ತಿದೆ. ಜನರನ್ನು ಸೌಲಭ್ಯಗಳಿಂದ ವಂಚಿಸುವ ಹುನ್ನಾರವನ್ನು ಖಂಡಿಸಿ ಕ್ಷೇತ್ರವಾರು ಪ್ರತಿಭಟನೆಗೆ ಬಿಜೆಪಿ ನಿರ್ಧಾರ ಮಾಡಿದೆ ಎಂದರು.

ಜನವಸತಿ ಪ್ರದೇಶಗಳಿಗೆ ತೊಂದರೆ ಬೇಡ

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಮಾತನಾಡಿದ ಸುನೀಲ್‌ ಕುಮಾರ್‌, ಜನವಸತಿ ಪ್ರದೇಶಗಳಿಗೆ ತೊಂದರೆ ಕೊಡಬಾರದು. ಜನರಿಗೆ ತೊಂದರೆಯಾಗದ ಸರ್ವೇ ಆಗಬೇಕು. ಏಕಾಏಕಿ ಬೆಂಗಳೂರು ಅಧಿಕಾರಗಳು ವರದಿ ಜಾರಿ ಮಾಡಬಾರದು. ಕೃಷಿ ಕಂದಾಯ ಅರಣ್ಯ ಪ್ರತ್ಯೇಕ ಸರ್ವೇ ನಡೆಸಬೇಕು. ಜನವಸತಿ ಪ್ರದೇಶಗಳಿಗೆ ತೊಂದರೆ ಕೊಡಬೇಡಿ ಎಂದರು.

ವ್ಯವಸ್ಥೆಗೆ ಮಾರಕ

ಪ್ರತಿಭಟನಾಕಾರರ ಮೇಲೆ ಮೊಕದ್ದಮೆ ಮೇಲೆ ಹಾಕಿದ್ದಾರೆ. ಉಡುಪಿ ಶಾಸಕರ ಮೇಲೆ ಮೇಲೆ ಮೊಕದ್ದಮೆ ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಉಡುಪಿಯಲ್ಲಿ ಪ್ರಜಾಪ್ರಭುತ್ವ ನೆಲೆಯ ಹೋರಾಟಕ್ಕೆ ಅವಕಾಶವಿಲ್ಲ. ಇದು ವ್ಯವಸ್ಥೆಗೆ ಮಾರಕವಾದ ವಿಚಾರ. ಯಶಪಾಲ್ ಸುವರ್ಣ ಮತ್ತು ಕಾರ್ಯಕರ್ತರ ಮೇಲಿನ ಮುಖದಲ್ಲಿ ವಾಪಸ್ ಪಡೆಯಿರಿ. ಅನಗತ್ಯ ಅನಾಹುತಗಳಿಗೆ ಅವಕಾಶ ಮಾಡಿಕೊಡಬೇಡಿ. ಕರಾವಳಿಯ ಮೂರು ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರ ಅಹವಾಲು ಕೇಳಿ. ಜನಪ್ರತಿನಿಧಿಗಳಿಗಿಂತ ಹೆಚ್ಚು ಆದ್ಯತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಕೇತ ಎಂದು ಕಿಡಿಕಾರಿದರು.

ಜನ ಆಡಳಿತ, ಪೊಲೀಸ್ ಇಲಾಖೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ವರಿಷ್ಠರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ. ಶಾಸಕರು ರಸ್ತೆಗೆ ಇಳಿಯುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಕರಾವಳಿಗೆ ನ್ಯಾಯ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next