Advertisement

ನಟ ಧರ್ಮೇಂದ್ರ ಟ್ವಿಟರ್‌ ಪ್ರವೇಶ; ಅಭಿಮಾನಿಗಳಿಗೆ ಮೊದಲ ಟ್ವೀಟ್‌

12:01 PM Aug 18, 2017 | udayavani editorial |

ಮುಂಬಯಿ : ಹಿಂದಿ ಚಿತ್ರರಂಗದ ಹಿರಿಯ ನಟ, 81ರ ಹರೆಯದ ಧರ್ಮೇಂದ್ರ ಅವರು ಟ್ವಿಟರ್‌ ಸಾಮಾಜಿಕ ಮಾಧ್ಯಮ ಲೋಕವನ್ನು ಪ್ರವೇಶಿಸಿದ್ದು ಇಂದು ಅವರು ತಮ್ಮ ಮೊತ್ತಮೊದಲ ಟ್ವೀಟ್‌ ಮಾಡಿ ತಮ್ಮ ಅಭಿಮಾನಗಳಿಗೆ ರೋಮಾಂಚನ ಉಂಟುಮಾಡಿದ್ದಾರೆ. 

Advertisement

ಧರ್ಮೇಂದ್ರ ಅವರು ಪ್ರಕೃತ ಹೈದರಾಬಾದ್‌ನಲ್ಲಿ ತನ್ನ “ಯಮ್‌ಲಾ ಪಗ್ಲಾ ದೀವಾನಾ ಫಿರ್‌ ಸೇ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದು ಚಿತ್ರದ ಸೆಟ್‌ನಲ್ಲಿರುವಾಗಲೇ ಮೊದಲ ಟ್ವೀಟ್‌ ಮಾಡಿರುವುದು ವಿಶೇಷವಾಗಿದೆ. 

“ನಿಮ್ಮೆಲ್ಲರ ಪ್ರೀತಿಯೇ ನನ್ನನ್ನು ಇನ್ನಷ್ಟು ನಿಮ್ಮ ಸನಿಹಕ್ಕೆ ತಂದಿದೆ. ನಾನೀಗ ವೈಎಸ್‌ಡಿ ಫಿರ್‌ ಸೇ ಸೆಟ್‌ನಲ್ಲಿದ್ದುಕೊಂಡು ಈ ಟ್ವೀಟ್‌ ಮಾಡುತ್ತಿದ್ದೇನೆ’ ಎಂದು ಧರ್ಮೇಂದ್ರ ಬರೆದಿದ್ದಾರೆ. 

ಈ ಹೊಸ ಚಿತ್ರದಲ್ಲಿ ನಟ ಬಾಬ್ಬಿ ದೇವಲ್‌ ಕೂಡ ನಟಿಸುತ್ತಿದ್ದು  ತಂದೆ ಧರ್ಮೇಂದ್ರ ಅವರನ್ನು ಟ್ವಿಟರ್‌ ಪ್ರಪಂಚಕ್ಕೆ ಸಾಗತಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next