Advertisement
ಗ್ರಾಮ ಕಲ್ಯಾಣ ಯೋಜನೆಯಡಿಯಲ್ಲಿ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ, ವ್ಯಾಯಾಮ ಶಾಲೆ, ಸಾರ್ವಜನಿಕ ಶೌಚಾಲಯ ರಚನೆ, ಭಜನ ಮಂದಿರ ನಿರ್ಮಾಣ, ಗೋ ಶಾಲಾ ನಿರ್ವಹಣೆ, ಮಹಿಳಾ ಮಂಡಳಿ ಕಟ್ಟಡ, ಅಂಧರ ಗೀತಗಾಯನ ಕಲಾ ಸಂಘಕ್ಕೆ ಸಹಾಯಧನ, ಸ್ತ್ರೀಶಕ್ತಿ ಭವನದ ಕಟ್ಟಡ ನಿರ್ಮಾಣ ಮುಂತಾದ 33 ಕಾಮಗಾರಿಗಳಿಗೆ 36 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮದಡಿ ದಹನ ಶೆಡ್ ರಚನೆ, ಸಿಲಿಕಾನ್ ಚೇಂಬರ್ ಅಳವಡಿಕೆ, ಆವರಣ ಗೋಡೆ ರಚನೆ, ದಾಸ್ತಾನು ಕೊಠಡಿ ನಿರ್ಮಾಣ, ತ್ಯಾಜ್ಯ ಗುಂಡಿ ನಿರ್ಮಾಣ, ಶೌಚಾಲಯ ನಿರ್ಮಾಣ, ನೀರು ಮತ್ತು ವಿದ್ಯುತ್ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ 6 ಹಿಂದೂ ರುದ್ರಭೂಮಿಗಳಿಗೆ 12.50 ಲಕ್ಷ ರೂ. ಮಂಜೂರಾಗಿದೆ. ಜ್ಞಾನದೀಪ ಕಾರ್ಯಕ್ರಮದಡಿ ಶಾಲಾ ಕಟ್ಟಡ, ಸಭಾಭವನ, ರಂಗಮಂದಿರ, ಶೌಚಾಲಯ, ಆವರಣ ಗೋಡೆ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ 8.25 ಲಕ್ಷ ರೂ. ನೀಡಲಾಗಿದೆ. 1990ರಿಂದ ಇದುವರೆಗೆ 269.37 ಕೋ.ರೂ.ಗಳನ್ನು ಡಾ| ಹೆಗ್ಗಡೆ ಮಂಜೂರು ಮಾಡಿದ್ದಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ಹಿರಿಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Related Articles
ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಸಂದರ್ಭ ಘೋಷಿಸಿದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ವಿವಿಧ ಬಗೆಯ ಸಲಕರಣೆಯನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯದ 1,240 ವಿಶೇಷ ಚೇತನರಿಗೆ 35 ಲಕ್ಷ ರೂ. ಮೌಲ್ಯದ ಸಲಕರಣೆ ವಿತರಣೆಗೆ ಮಂಜೂರಾತಿ ನೀಡಲಾಗಿದೆ.
Advertisement