ಬೆಳ್ತಂಗಡಿ: ಕೋವಿಡ್ 19ದಿಂದ ರಾಜ್ಯದಲ್ಲಿ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿ ದ್ದರೂ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಶುದ್ಧ ಕುಡಿಯುವ ನೀರಿನ “ಶುದ್ಧಗಂಗಾ’ ಕಾರ್ಯಕ್ರಮ ಗ್ರಾಮಸ್ಥರಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ.
ರಾಜ್ಯದ 18 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 275 ಶುದ್ಧಗಂಗಾ ಘಟಕಗಳು ಕುಟುಂಬವೊಂದಕ್ಕೆ ಶುದ್ಧೀಕರಿಸಿದ 20 ಲೀಟರ್ ನೀರನ್ನು ಪ್ರತಿನಿತ್ಯ71,000 ಕುಟುಂಬಗಳಿಗೆ ಒದಗಿಸು ತ್ತಿವೆ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಎಲ್ಲ ಘಟಕಗಳು ಸುಸ್ಥಿರವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡ ಲಾಗಿದ್ದು, ಪ್ರತಿನಿತ್ಯ ಇದಕ್ಕಾಗಿ ಹೆಚ್ಚಿನ ಘಟಕಗಳನ್ನು ಯಾಂತ್ರೀಕೃತಗೊಳಿಸಿ, ಮಾನವ ನಿರ್ವಹಣಾ ರಹಿತ ಘಟಕಗಳನ್ನಾಗಿ ಮಾಡಲಾಗಿದೆ. ದಿನವೊಂದಕ್ಕೆ ಸುಮಾರು 14 ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಜನರು ಒಯ್ಯುತ್ತಿದ್ದಾರೆ.
ಇದಕ್ಕಾಗಿ 325 ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ, ಗ್ರಾಹಕರಿಗೆ ನಿಲ್ಲಲು ಗುರುತು ಮಾಡಲಾಗಿದೆ ಎಂದು ಡಾ| ಮಂಜುನಾಥ್ ತಿಳಿಸಿದ್ದಾರೆ.