ಕೆ.ಆರ್.ನಗರ: ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 5 ವರ್ಷಗಳಿಂದ ಸುಮಾರು 2830 ಪ್ರಗತಿ ಬಂಧು ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿ ಅವುಗಳಿಗೆ 46.7 ಕೋಟಿ ರೂ ಸಾಲ ವಿತರಿಸಿ ಈ ಮೂಲಕ ಮಹಿಳೆಯರನ್ನು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಗಾಯತ್ರಿ ಹೇಳಿದರು.
ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಪ್ಪಣ್ಣ ಸ್ವಾಮಿ, ಷಣ್ಮುಖಸ್ವಾಮಿ, ದೊಡ್ಡಮ್ಮತಾಯಿ, ವಿN°àಶ್ವರ, ಭೈರವೇಶ್ವರ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ನಮ್ಮ ಈ ಯೋಜನೆಯು ಕೇವಲ ಸಾಲ ವಿತರಣೆಗೆ ಸೀಮಿತಗೊಳ್ಳದೇ ಶೌಚಾಲಯ ನಿರ್ಮಾಣಕ್ಕೆ ಶಾಲೆಗಳು, ಡೈರಿಗಳು, ದೇಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವುದರ ಜತಗೆ ಅಂಗವಿಕಲರಿಗೆ ಮಾಶಾಸನ ಮತ್ತು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೃಷಿಗೆ ಪೋ›ತ್ಸಾಹ ಧನ ನೀಡುವುದರ ಜತಗೆ ಇನ್ನು ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಹಮ್ಮಿಕೊಂಡಿದೆ ಎಂದರು.
ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಸಂಘಗಳನ್ನು ಸ್ಥಾಪನೆ ಮಾಡಿದರೆ ಸಾಲದು ಇದರಿಂದ ತಮ್ಮ ಕುಟುಂಬಗಳ ಆರ್ಥಿಕತೆ ಉತ್ತಮಗೊಳಿಸಿಕೊಳ್ಳಬೇಕು ಅಲ್ಲದೇ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಚುಂಚನಕಟ್ಟೆ ವಲಯದಿಂದ ಸಾಲಿಗ್ರಾಮ ವಲಯಕ್ಕೆ ವರ್ಗಾವಣೆಗೊಂಡ ವಲಯ ಮೇಲ್ವಿಚಾರಕ ವಿದ್ಯಾನಂದ ಅವರಿಗೆ ಗೌರವ ಅರ್ಪಣೆ ಮಾಡಲಾಯಿತು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿನಯ್, ಗ್ರಾಪಂ ಸದಸ್ಯರಾದ ರಾಮಮ್ಮ, ಗೌರಮ್ಮ, ನಂದಿನಿ, ಸುಶೀಲಾ, ಯೋಜನೆಯ ಸಮಯನಾಧಿಕಾರಿ ಗೀತಾ, ಸೇವಾ ಪ್ರತಿನಿಧಿಗಳಾದ ಮೀನಾ, ವೀಣಾ, ನಿರ್ಮಲ ಸಂಘದ ಪ್ರತಿನಿಧಿಗಳಾದ ರೂಪ, ಮೀನಾಕ್ಷಿ, ಕಮಲಮ್ಮ, ಭಾರತಿ, ಇಂದ್ರಮ್ಮ, ಉಮಾ, ಸೇರಿದಂತೆ ಇನ್ನಿತತರು ಹಾಜರಿದ್ದರು.