Advertisement

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ

11:32 AM Nov 13, 2017 | |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನ. 13ರಿಂದ 18ರ ವರೆಗೆ ನಡೆಯಲಿವೆ.

Advertisement

ರಾಜ್ಯಮಟ್ಟದ 40ನೇ ವರ್ಷದ ವಸ್ತು ಪ್ರದರ್ಶನ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಇಂದಿ ನಿಂದ ಆರಂಭವಾಗಲಿದೆ. ಅಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯ ಲಿವೆ. ಈಗಾಗಲೇ ಕ್ಷೇತ್ರ ವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸ ಲಾಗಿದೆ. ಕ್ಷೇತ್ರದಲ್ಲಿ  ಕಾರ್ತಿಕ ಮಾಸದ ಸೋಮವಾರವಾದ ಕಾರಣ ಅಪಾರ ಜನಸಂದಣಿಯಿದೆ.

ಪಾದಯಾತ್ರೆ
ಕಳೆದ 4 ವರ್ಷಗಳಿಂದ ಉಜಿರೆ ಯಿಂದ ಧರ್ಮಸ್ಥಳವರೆಗೆ ಲಕ್ಷ ದೀಪೋತ್ಸವದ ಪ್ರಥಮ ದಿನ ನಮ್ಮ ನಡಿಗೆ ಮಂಜುನಾಥನ ಕಡೆಗೆ ಎನ್ನುವ ಪಾದಯಾತ್ರೆ ನಡೆ ಯುತ್ತಿದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಧರ್ಮಸ್ಥಳ ವರೆಗೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳು ತ್ತಾರೆ. ಈ ಬಾರಿ 10,000 ಮಂದಿ ಪಾದ ಯಾತ್ರೆ ಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸರ್ವಧರ್ಮ, ಸಾಹಿತ್ಯ ಸಮ್ಮೇಳನ
ನ. 15ರಂದು ಲಲಿತಕಲಾ ಗೋಷ್ಠಿ ನಡೆದು, ನ.16ರಂದು ಗುರುವಾರ ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ವೆಲ್ಲೂರಿನ ಶ್ರೀ ನಾರಾಯಣೀ ಪೀಠಮ್‌ನ ಶ್ರೀ ಶಕ್ತಿ ಅಮ್ಮ ಉದ್ಘಾಟಿಸುವರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವ ರಾಜರಾಯ ರೆಡ್ಡಿ ಅಧ್ಯಕ್ಷತೆ ವಹಿಸುವರು. ಪ್ರಜಾವಾಣಿ ದೈನಿಕದ ನಿವೃತ್ತ ಕಾರ್ಯನಿರ್ವಾಹಕ ಸಂಪಾ ದಕ ಪದ್ಮರಾಜ ದಂಡಾವತಿ, ಮಾಜಿ ಶಾಸಕ ಶಫಿ ಅಹಮ್ಮದ್‌ ಮತ್ತು ಹೆಂಗಳೂರಿನ ಫಾ| ಅಂತೋನಿ ರಾಜ್‌ ಧಾರ್ಮಿಕ ಉಪನ್ಯಾಸ ನೀಡು ವರು. ರಾತ್ರಿ 9ರಿಂದ ಕಿರುತೆರೆ ಕಲಾ ವಿದರಾದ ಮೈಸೂರು ಮಂಜು ನಾಥ ಹಾಗೂ ಮೈಸೂರು ನಾಗ ರಾಜ ವೃಂದದವರಿಂದ ಪಿಟೀಲು ಜುಗಲ್‌ಬಂದಿ ನಡೆಯಲಿದೆ.

ನ. 17ರಂದು ಶುಕ್ರವಾರ ಸಾಹಿತ್ಯ ಸಮ್ಮೇಳನದ 85ನೇ ಅಧಿ ವೇಶನ ವನ್ನು ಖ್ಯಾತ ಸಾಹಿತಿ ಸುಧಾ ಮೂರ್ತಿ ಉದ್ಘಾಟಿಸುವರು. ಬೆಂಗ ಳೂರಿನ ಸಾಹಿತಿ ಬಿ.ಆರ್‌. ಲಕ್ಷ ¾ಣ ರಾವ್‌ ಅಧ್ಯಕ್ಷತೆ ವಹಿಸುವರು. ಖ್ಯಾತ ವಿಮರ್ಶಕ ಎಸ್‌.ಆರ್‌. ವಿಜಯ ಶಂಕರ್‌, ಸಾಹಿತಿ ರಂಜಾನ್‌ದರ್ಗಾ ಮತ್ತು ಮಂಗಳೂರಿನ ಪ್ರೊ| ಭುವನೇಶ್ವರಿ ಹೆಗಡೆ ಉಪ ನ್ಯಾಸ ನೀಡುವರು. ರಾತ್ರಿ 9ರಿಂದ ಬೆಂಗಳೂರಿನ ರಾಧಾಕಲ್ಪ ನೃತ್ಯ ತಂಡದ ಕಲಾವಿದ ರಿಂದ ಭರತನಾಟ್ಯ ಪ್ರದರ್ಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next