Advertisement
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೀಪೋತ್ಸವದ ಆಚರಣೆಯಲ್ಲಿ ಕಂಡು ಬಂದ ಒಂದು ವೈಶಿಷ್ಟ್ಯಎಂದರೆ ಗಿಣಿಶಾಸ್ತ್ರ ಹೇಳುಗರು. ಇಲ್ಲಿಗೆ ಬಂದಿದ್ದ ಗಿಣಿಶಾಸ್ತ್ರದವರು ‘ಸುಡಗಾಡು ಸಿದ್ಧರು’ ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದವರು. ತಲೆತಲಾಂತರದಿಂದಲೂ ಸಾಗಿ ಬಂದಿರುವ ಕುಲಕಸುಬಾದ ಗಿಣಿಶಾಸ್ತ್ರವನ್ನು ಹೇಳುತ್ತಿದ್ದಾರೆ.
ಇವರದ್ದು ಕೇವಲ ಹೊಟ್ಟೆಪಾಡಿನ ಉದ್ಯೋಗವಷ್ಟೇ ಅಲ್ಲ. ಗಿಣಿ ಶಾಸ್ತ್ರ ಹೇಳುವುದು ತಲೆತಲಾಂತರದ ಸಂಪ್ರದಾಯ ಎನ್ನುವ ಕಾರಣಕ್ಕೆ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಗಿಣಿ ಭವಿಷ್ಯ ಹೇಳುತ್ತಾರೆ. ಶಾಸ್ತ್ರ ಹೇಳಿ ಸಂಪಾದಿಸಿದ ಮೊತ್ತವನ್ನು ಶ್ರೀ ಸಿದ್ಧಾರೂಢ ಮಠಕ್ಕೆಅರ್ಪಿಸುತ್ತಾರೆ. ಇನ್ನುಳಿದ ಹತ್ತು ತಿಂಗಳು ಹಚ್ಚೆ ಹಾಕುತ್ತಾರೆ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರುತ್ತಾರೆ. ನಾಲ್ಕು ತಲೆಮಾರಿನ ಜನ ಭವಿಷ್ಯ ಹೇಳುವುದನ್ನು ಮುಂದುವರೆಸಿದ್ದಾರೆ. ಜೊತೆಯಲ್ಲಿ ಮನೆಯ ಒಬ್ಬನೇ ಸದಸ್ಯ ಈ ವೃತ್ತಿಯಲ್ಲಿರಬಹುದು. ತಮ್ಮ ವೃತ್ತಿಯ ಪಾಲುದಾರನಾದ ಗಿಣಿಯನ್ನ ಚಿಕ್ಕಮರಿ ಇದ್ದಾಗಲೇ ಪಡೆದು ಅದಕ್ಕೆ ತರಬೇತಿ ನೀಡಲಾಗುತ್ತದೆ. ಭವಿಷ್ಯ ಹೇಳುವಾಗ ಗಿಣಿ ತನ್ನ ಯಜಮಾನನ ಆದೇಶದಂತೆ ಹಲವು ಕಾರ್ಡ್‌ಗಳಲ್ಲಿ ಒಂದನ್ನು ಆಯ್ದು ನೀಡಿ ಮತ್ತೆ ಪಂಜರ ಸೇರುತ್ತದೆ.
ಲಕ್ಷದೀಪೊತ್ಸವಕ್ಕೆ ಆಗಮಿಸಿದ್ದ ಜನರು ಗಿಣಿಶಾಸ್ತ್ರ ಕೇಳಲು ಸಾಲಾಗಿ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಗಿಣಿರಾಮನ ಭವಿಷ್ಯ ಕೇಳಿ ತೃಪ್ತರಾಗಿ ಹೋದರೆ, ಇನ್ನು ಕೆಲವರು ಚಿಂತೆಯಲ್ಲಿ ಸಾಗಿದರು. ಸಾಲಾಗಿ ಕುಳಿತಿರುವ ಗಿಣಿಗಳು ನೋಡಲು ಆಕರ್ಷಕವಾಗಿತ್ತು.
Related Articles
Advertisement
ವರದಿ: ವಾಣಿ ಭಟ್ ; ಚಿತ್ರಗಳು: ಸುರ್ವಣಾ ಹೆಗಡೆ