Advertisement

ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ ಯಾಂತ್ರೀಕೃತ ಭತ್ತ ಬೇಸಾಯ ಮಾದರಿ

09:48 AM Nov 28, 2019 | Hari Prasad |

ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನ ಪ್ರಾಂಗಣದಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ವಿಧಾನಗಳನ್ನು ವಿವರಿಸುವ ಮಾದರಿ ಯುಜನತೆಯ ಮನ್ನಣೆಗೆ ಪಾತ್ರವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭತ್ತ ಬೇಸಾಯದ ಯಾಂತ್ರೀಕೃತ ವಿಧಾನವನ್ನು ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ.

Advertisement

ಪ್ರಸ್ತುತ ಹೆಚ್ಚುತ್ತಿರುವ ಬೇಸಾಯದ ಖರ್ಚು ಹಾಗೂ ವಾಣಿಜ್ಯ ಬೆಳೆಗಳ ಮೇಲಿನ ಆಕರ್ಷಣೆಯಿಂದ ರೈತರು ಭತ್ತ ಬೇಸಾಯದಿಂದ ವಿಮುಖರಾಗುತ್ತಿರುವ ಹಿನ್ನಲೆಯಲ್ಲಿ ಪರಿಹಾರವೆಂಬಂತೆ ಬೇಸಾಯ ವೆಚ್ಚವನ್ನು ನಿಯಂತ್ರಿಸಿ, ಇಳುವರಿಯನ್ನು ಹೆಚ್ಚಳ ಮಾಡುವುದಷ್ಟೇ ಅಲ್ಲದೆ ಭೂಮಿ ಹದಗೊಳಿಸುವುದರಿಂದ ಹಿಡಿದು ಬೆಳೆ ಕೊಯ್ಲಿನವರೆಗೆ ಯಾಂತ್ರೀಕೃತ ವಿಧಾನದಲ್ಲಿ ಬೇಸಾಯ ಮಾಡುವ ವಿನೂತನ ಮಾದರಿಯ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.


ಹಸಿರೆಲೆ ಗೊಬ್ಬರಕ್ಕಾಗಿ ಟ್ರ್ಯಾಕ್ಟರ್‌ ಚಾಲಿತ ಡಿಸ್ಕ್ ನೇಗಿಲು, ಭೂಮಿ ತಯಾರಿಗಾಗಿ ಟ್ರ್ಯಾಕ್ಟರ್‌ಚಾಲಿತ ಕಲ್ಟಿವೇಟರ್, ಟಿಲ್ಲರ್, ನರ್ಸರಿ ತಯಾರಿಗಾಗಿ ಟ್ರೇಗಳು, ಸಸಿಗಳ ನಾಟಿಗಾಗಿ ನಾಟಿಯಂತ್ರ, ಕಳೆ ನಿರ್ವಹಣೆಗಾಗಿ, ಮಾನವ ಚಾಲಿತ ಅಥವಾ ಯಾಂತ್ರೀಕೃತ ಕೋನೋವೀಡರ್‌ ಕೊಯ್ಲಿಗಾಗಿ ರೀಪರ್‌ ಅಥವಾ ಯಾಂತ್ರೀಕೃತ ಕೋನೋವೀಡರ್, ಒಕ್ಕಣೆಗಾಗಿ ಒಕ್ಕಣೆಯಂತ್ರ ಇವೆಲ್ಲಜನರಿಗೆ ಸಹಕಾರಿಯಾಗುತ್ತದೆ.

ಸಾಂಪ್ರದಾಯಿಕ ವಿಧಾನವನ್ನುಅನುಸರಿಸುವವರಿಗೆ ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗದೆ ನಾಟಿ ವಿಳಂಬವಾಗುವುದರ ಜೊತೆಗೆ ಕೈಯಿಂದ ನಾಟಿ ಮಾಡಿ ಆಳ ಮತ್ತು ಅಂತರ ಸರಿಯಾಗದೆ ಇಳುವರಿ ಕಡಿಮೆಯಾಗುತ್ತದೆ. ಆದರೆ ಯಾಂತ್ರೀಕೃತ ವಿಧಾನದಲ್ಲಿ ಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ನಾಟಿ ಮಾಡಬಹುದಾಗಿರುವುದರಿಂದ ಭತ್ತ ಕೃಷಿಕರಿಗೆ ಈ ಯಂತ್ರಗಳು ಹೆಚ್ಚು ಲಾಭದಾಯಕವಾಗಿವೆ.

ವರದಿ: ತಾರುಣ್ಯ ಸನಿಲ್ ; ಚಿತ್ರ: ಗಾಯತ್ರಿಗೌಡ




Advertisement

Udayavani is now on Telegram. Click here to join our channel and stay updated with the latest news.

Next