Advertisement
ಮೊದಲನೇ ದಿನ ಹೊಸಕಟ್ಟೆ ಉತ್ಸವ, ಎರಡನೇ ದಿನ ಕೆರೆಕಟ್ಟೆ ಉತ್ಸವ, ಮೂರನೇ ದಿನ ಲಲಿತೋದ್ಯಾನ ಉತ್ಸವ, ನಾಲ್ಕನೇ ದಿನ ಕಂಚಿಮಾರುಕಟ್ಟೆ ಉತ್ಸವ, ಐದನೇ ದಿನ ಗೌರಿಮಾರುಕಟ್ಟೆ ಉತ್ಸವ ಹೀಗೆ 5 ದಿನಗಳ ಉತ್ಸವದ ನಂತರ ಆರನೇ ದಿನ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಜರಗುತ್ತದೆ.ಈ ಉತ್ಸವ ಪೂಜಾ ಕಾರ್ಯಕ್ರಮವೆಲ್ಲ ರಾತ್ರಿ 9 ರ ನಂತರ ಜರಗುವುದರಿಂದ ಎಲ್ಲಿ ನೋಡಿದರಲ್ಲಿ ಒಂದೊಂದು ಬಣ್ಣದ ಬೆಳಕಿನ ಸರಗಳು ನಮ್ಮನ್ನು ಸ್ವಾಗತಿಸುತ್ತಿರುತ್ತವೆ. ಬಳೆ, ಸರ, ಕಿವಿ ಓಲೆ, ಉಂಗುರ ಇವೆಲ್ಲವೂ ತನ್ನ ಸೌಂದರ್ಯವನ್ನು ಒಂದು ಪಟ್ಟು ಹೆಚ್ಚಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿರುತ್ತವೆ.
ಪಾದಯಾತ್ರೆಯಿಂದ ಆರಂಭವಾದ ದೀಪೋತ್ಸವದ ಎರಡನೇ ದಿನದ ಕೆರೆಕಟ್ಟೆ ಉತ್ಸವ ವಿಜೃಂಭಣೆಯಿಂದ ಸಾಗಿದೆ.
Related Articles
ದೇವರನ್ನು ಹತ್ತಿರದಿಂದ ನೋಡಿ ದೇವರ ಕೃಪೆಗೆ ಪಾತ್ರರಾಗಲು ಭಕ್ತಾದಿಗಳಿಗೆ ಇಂದೊಂದು ಸದಾವಕಾಶವಾಗಿತ್ತು. ಇದರ ಜೊತೆಗೆ ಅಲ್ಲಿ ಇದ್ದ ಆನೆ ಮತ್ತು ಬಸವ ಎಲ್ಲರ ಗಮನವನ್ನು ಸೆಳೆಯುತ್ತಿದ್ದವು.
Advertisement
ಆನೆಯ ಬಳಿ ಭಕ್ತರು ಆಶೀರ್ವಾದ ಪಡೆದುಕೊಳ್ಳುವ ಮೂಲಕ ಖುಷಿಪಡುತ್ತಿದ್ದರು. ಹೀಗೆ ಎರಡನೇ ದಿನದ ಉತ್ಸವ ಬಣ್ಣ ಬಣ್ಣದ ಬೆಳಕು, ದೇವರ ಪೂಜೆ, ವಿವಿಧರೀತಿಯ ವಾದ್ಯ( ಜಾಗಟೆ, ಶಂಖ, ಡ್ರಮ್ಸೆಟ್, ತಬಲ ) ಇವುಗಳಿಂದ ಕೂಡಿತ್ತು.
– ಮಧುರಾ ಎಲ್ ಭಟ್ಟ. ಎಸ್ ಡಿ ಎಂ ಕಾಲೇಜ್ ಉಜಿರೆ