Advertisement

ಧರ್ಮಸ್ಥಳದಲ್ಲಿ ‘ಶುದ್ಧ ಗಂಗಾ’ ಬಿಂಬಗಳು

09:48 AM Nov 28, 2019 | Hari Prasad |

ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದ ಮೂಲಕ ಜನಮನ್ನಣೆ ಪಡೆದಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಜನಸಾಮಾನ್ಯರಿಗೆ ಶುದ್ಧ ಕುಡಿಯವ ನೀರು ಒದಗಿಸುವ ಸಂಕಲ್ಪದೊಂದಿಗೆ ರೂಪಿಸಿದ ಶುದ್ಧ ಗಂಗಾ ಯೋಜನೆಯ ಸಮಗ್ರ ಚಿತ್ರಣವನ್ನು ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನ ಪ್ರಾಂಗಣದಲ್ಲಿ ಅನಾವರಣಗೊಳಿಸಲಾಗಿದೆ.

Advertisement

ಅಶುದ್ಧ ನೀರು ಕುಡಿಯುವುದರಿಂದಜನರು ಅನಾರೋಗ್ಯಕ್ಕೆ ತುತ್ತಾಗುವುದನ್ನು ಮನಗಂಡು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ’ಶುದ್ಧಗಂಗಾ’ ಕುಡಿಯುವ ನೀರಿನ ಘಟಕಕ್ಕೆ ಡಾ. ಹೆಗ್ಗಡೆ ಅವರು ಚಾಲನೆ ನೀಡಿದ್ದರು.

ಈ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಈ ಯೋಜನೆಯ ಮಹತ್ವವನ್ನು ತಿಳಿಸಿಕೊಡುವ ವಿವಿಧ ವಿನ್ಯಾಸಗಳು, ಚಿತ್ರಗಳು ಇಲ್ಲಿ ಲಭ್ಯವಿವೆ. ಈ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆ ರಾಜ್ಯದ ಹಲವು ಕಡೆಗಳಲ್ಲಿ ಈಗಾಗಲೇ ಸ್ಥಾಪಿತವಾಗಿದ್ದು, ಅಗತ್ಯ ಇರುವ ಜನರಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಕಡೆಗಳಲ್ಲೂ ಈ ಯೋಜನೆಯನ್ನುಪ್ರಾರಂಭಿಸುವ ಆಕಾಂಕ್ಷೆ ಶ್ರೀ ಕ್ಷೇತ್ರದ್ದಾಗಿದೆ.

ಅಮೆರಿಕಾದ ತಂತ್ರಜ್ಞಾನ ಹೊಂದಿರುವ ಈ ಯಂತ್ರದಲ್ಲಿ ನಾಲ್ಕು ರೀತಿಯಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಪ್ರತಿನಿತ್ಯ ಒಂದು ಮನೆಗೆ ಇಪ್ಪತ್ತು ಲೀಟರ್ ನೀರನ್ನು ಈ ಯೋಜನೆಯಡಿಯಲ್ಲಿ ಒದಗಿಸಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಡಿ ರಾಜ್ಯದ 283 ಕಡೆಗಳಲ್ಲಿ ಯೋಜನೆಯನ್ನು ಪಾರಂಭಿಸಲಾಗಿದೆ.


ಹಾನಿಕಾರಕ ಧಾತುಗಳಾಗಿರುವ ಅರ್ಸೆನಿಕ್, ಕ್ರೋಮಿಯಂ, ಕ್ಯಾಡ್ಮಿಯಂ, ತಾಮ್ರ, ಕಬ್ಬಿಣ, ಪಾದರಸ, ಸೀಸ, ಸತು ಮುಂತಾದವುಗಳಿಂದ ಅಂತರ್ಜಲದೊಂದಿಗೆ ಬೆರೆತು ನೀರು ಕಲುಷಿತಗೊಳ್ಳುತ್ತದೆ. ಕರ್ನಾಟಕ ರಾಜ್ಯದ ಶೇ.60ರಷ್ಟು ಗ್ರಾಮ, ಪಟ್ಟಣ ವ್ಯಾಪ್ತಿಯಲ್ಲಿ ಅಶುದ್ಧ ನೀರನ್ನು ಬಳಸುತ್ತಿರುವುದರಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ನೈಟ್ರೇಟ್ ಪ್ರಮಾಣ ಅಧಿಕವಾಗಿರುವ ಕುಡಿಯುವ ನೀರಿನಲ್ಲಿ ಶಿಶುಗಳಲ್ಲಿ ನೀಲಿ ಶಿಶು ರೋಗವನ್ನುಂಟು ಮಾಡಬಹುದು. ದೊಡ್ಡವರಲ್ಲಿ ಕ್ಯಾನ್ಸರ್ ಸಂಬಂಧಿತ ರೋಗವನ್ನುಂಟು ಮಾಡಬಹುದು. ಕುಡಿಯುವ ನೀರಿನಲ್ಲಿ ಟಿಡಿಎಸ್ ಪ್ರಮಾಣ ಹೆಚ್ಚಿರುವುದರಿಂದ ಮೂತ್ರ ಜನಕಾಂಗದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ.


ಕಲುಷಿತ ನೀರಿನಿಂದ ಪ್ರತಿಶತ ಶೇ.80 ರಷ್ಟು ಖಾಯಿಲೆಗಳು ಬರುತ್ತಿವೆ. ಈ ನೀರಿನಲ್ಲಿರುವ ರೋಗಾಣುಗಳಿಂದ ವಾಂತಿ, ವಿಷಮಜ್ವರ, ಕಾಲರಾ,ರಕ್ತ ಬೇಧಿ, ಕಾಮಾಲೆ, ಪೋಲಿಯೋ. ಏಕಾಣುಗಳಿಂದ ಅಮಿಬಿಕ್‌ ಡಿಸೇಂಟ್ರಿ, ಜಿಯಾರ್ಡಿಯಾಸಿಸ್, ದುಂಡು ಹುಳುಗಳಿಂದ ಪರಪಿಂಡ ರೋಗಗಳು ಹಾಗೂ ಲಿಫ್ಟೋಸೈರಲ್, ತಲೆ ಸುರುಳಿ ಬೇನೆ ಈ ಎಲ್ಲ ರೋಗಗಳನ್ನು ಬರದಂತೆ ತಡೆಯಲು ಈ ಶುದ್ಧ ಗಂಗ ಯೋಜನೆ ಸಹಕಾರಿಯಾಗುತ್ತಿದೆ.

Advertisement

ವರದಿ: ಗಾಯತ್ರಿಗೌಡ ; ಚಿತ್ರಗಳು :ತಾರುಣ್ಯ ಸನಿಲ್


Advertisement

Udayavani is now on Telegram. Click here to join our channel and stay updated with the latest news.

Next