Advertisement
ಶ್ರೀ ಮಂಜುನಾಥ ಸ್ವಾಮಿಗೆ ಗರ್ಭ ಗುಡಿಯೊಳಗೆ ವಿಶೇಷ ಪೂಜೆಗಳು ನೆರವೇರಿದ ಬಳಿಕ ಅಂಗಣದಲ್ಲಿ ಸರ್ವ ವಾದ್ಯಗಳೊಂದಿಗೆ 16 ಸುತ್ತು ಬಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇಗುಲದ ಮುಂಭಾಗದ ವಸಂತ ಮಹಲಿನ ಹೊಸಕಟ್ಟೆಗೆ ಮೆರವಣಿಗೆ ಯಲ್ಲಿ ಕರೆತರಲಾಯಿತು. ಅಲ್ಲಿ ಅಷ್ಟಸೇವೆಯೊಂದಿಗೆ ಪೂಜೆ ಸಂಪನ್ನವಾಯಿತು. ಬಳಿಕ ಬೆಳ್ಳಿ ರಥದಲ್ಲಿ ಮೂರ್ತಿಯನ್ನಿರಿಸಿ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಮಂಗಳಾರತಿ ಬೆಳಗುವ ಮೂಲಕ ಪ್ರಥಮ ದಿನದ ಸೇವೆಯಾದ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು. ಮೆರವಣಿಗೆ ಸಂದರ್ಭ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಾರ್ಗದ ಇಕ್ಕೆಲಗಳಲ್ಲಿ ಹಣತೆ ಹಚ್ಚಿದರು.
ಲಕ್ಷದೀಪೋತ್ಸವದಲ್ಲಿ ಡಿ. 10ರಂದು ರಾತ್ರಿ ಲಲಿತೋದ್ಯಾನ ಉತ್ಸವ ನೆರವೇರಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5ರಿಂದ ಭಕ್ತಿ ಸಂಗೀತ, ಭರತನಾಟ್ಯ, ಶಿವನಾದ, ಪ್ರಕೃತಿ-ನೃತ್ಯರೂಪಕ, ಮಾತನಾಡುವ ಗೊಂಬೆ ಮತ್ತು ಜಾದೂ ಪ್ರದರ್ಶನ ಜರಗಲಿದೆ.
Related Articles
ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 10.30ರ ವರೆಗೆ ಸಂಗೀತ ನಿರ್ದೇಶಕ ಗುರುಕಿರಣ್, ಅನುರಾಧಾ ಭಟ್ ಸಹಿತ ಗಾಯಕರು, ನೃತ್ಯ ತಂಡದಿಂದ ಗಾನ ನೃತ್ಯ ವೈವಿಧ್ಯ “ಗುರುಕಿರಣ್ ನೈಟ್’ ಇರಲಿದೆ.
Advertisement