ಬೆಳ್ತಂಗಡಿ: ನಮ್ಮ ದೇಶದ ಸಂಸ್ಕೃತಿ ಸಕಲ ಚರಾಚರಗಳನ್ನೂ ಗೌರವಿಸುವಂಥದ್ದು. ಸಂತರ ಸ್ವಾರ್ಥವಿಲ್ಲದ ಸಮಾಜಮುಖಿ ಸಂದೇಶ ಅಜರಾಮರ. ದೇವರ ಸ್ಮರಣೆಯನ್ನು ನಿಮ್ಮ ನಿಮ್ಮ ಭಾಷೆಯಲ್ಲೇ ಮಾಡಿ, ದೇವರಿಗೆ ತಲುಪುತ್ತದೆ. ಭಜನೆಯಿಂದ ಜಾತ್ಯತೀತ ಕಲ್ಯಾಣ ಎಂದು ಸಾಹಿತಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಬಣ್ಣಿಸಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನೆ ತರಬೇತಿ ಕಮ್ಮಟದ ರಜತ ವರ್ಷಾಚರಣೆ ಪ್ರಯುಕ್ತ ಮಂಗಳವಾರ ಸಂಜೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಅವರು ಉಪನ್ಯಾಸ ನೀಡಿದರು.
ಹೆಣಕ್ಕೂ ಹಣಕ್ಕೂ ವ್ಯತ್ಯಾಸ ವೊಂದೆ; ಎರಡೂ ನಗದು. ಭಾಷೆಯಲ್ಲಿ ವಿಚಾರವಂತಿಕೆಯಿದೆ. ಭಾಷೆಯಂತೆ ಜೀವನವೂ ಲವಲವಿಕೆಯಿಂದ ಕೂಡಿರಬೇಕು ಎಂದ ಅವರು ಸಂಸ್ಕಾರ, ಸಂಸ್ಕೃತಿ ನಮ್ಮ ಹೃದಯದೊಳಗಿನ ಧರ್ಮಸ್ಥಳವಾಗಬೇಕು ಎಂದು ಒಗಟು ಮತ್ತು ಗಾದೆಗಳ ಮೂಲಕ ವಿವರಿಸಿದರು.
ಭಜನೆ ಅದ್ಭುತ ಶಕ್ತಿ ಉಳ್ಳದ್ದು. ಸಂಘಟನೆ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಕೊಟ್ಟ ವರವಾಗಿದೆ. ಕನ್ನಡದಲ್ಲಿ ಓದುವುದು, ಬರೆಯು ವುದು, ಮಾತಾಡಿದರೆ ಕನ್ನಡ ಭಾಷೆ ಜೀವಂತವಾಗಿರುತ್ತದೆ. ಅದಕ್ಕೆ ಭಜನೆ ಮಾರ್ಗವಾಗಿದೆ ಎಂದರು.
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ನಮ್ಮ ಬದುಕೇ ಒಂದು ಸಂದೇಶ ವಾಗಬೇಕು ಎಂಬ ನೆಲೆಯಲ್ಲಿ ನಡೆಸುವ ಭಜನೆ ದೇವರ ಸಾಕ್ಷಾತ್ಕಾರಕ್ಕೆ ಸೇತುವಾಗಿದೆ. ಈ ಮೂಲಕ ಭಜನೆ ವಿಭಜನೆಯಾಗದೆ ಪರಿವರ್ತನೆಯಾಗಿದೆ ಎಂದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ ವೇದಿಕೆಯಲ್ಲಿದ್ದರು.
ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್, ಖ್ಯಾತ ಗಾಯಕ ಶಂಕರ್ ಶಾನುಭಾಗ್, ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯ ದರ್ಶಿ ಸುರೇಶ್ ಮೊಲಿ, ಪುರುಷೋತ್ತಮ ಪಿ.ಕೆ. ಭಾಗವಹಿಸಿದ್ದರು.
ಕಮ್ಮಟ ಸಂಯೋಜಕ ರಾಘವೇಂದ್ರ ಪೈ, ಸೀತಾರಾಮ ತೋಳ್ಪಡಿತ್ತಾಯ, ಮಮತಾ ರಾವ್, ನಾಗೇಂದ್ರ ಅಡಿಗ ಅವರನ್ನು ಡಾ| ಹೆಗ್ಗಡೆ ಸಮ್ಮಾನಿಸಿದರು. ಭಜನ ಪರಿಷತ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ 16 ಮಂದಿ ಸಾಧಕರನ್ನು ಗೌರವಿಸಲಾಯಿತು.
ಪುರುಷೋತ್ತಮ ಪಿ.ಕೆ. ಸ್ವಾಗತಿಸಿ, ಶ್ರೀನಿವಾಸ್ ನಿರ್ವಹಿಸಿ ದರು. ನಾರಾಯಣ ಪಾಟಾಳಿ ಸಾಧಕರ ವಿವರ ನೀಡಿದರು.