Advertisement

ಧರ್ಮಸ್ಥಳ: ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

10:47 AM Feb 04, 2018 | |

ಬೆಳ್ತಂಗಡಿ:ದೇಹ ನಶ್ವರ,ಆತ್ಮ ಶಾಶ್ವತ.ಶರೀರ ಬದಲಾಗಬಹುದು, ಆದರೆ ಆತ್ಮ ಬದಲಾಗುವು ದಿಲ್ಲ. ವ್ಯವಹಾರ ಮತ್ತು ನಿಜವನ್ನು ಅರಿತು ನಾವು ಮೋಕ್ಷ ಸಾಧನೆ ಮಾಡಬೇಕು. ಮೋಕ್ಷ ಪ್ರಾಪ್ತಿ ನಮ್ಮ ಗುರಿ ಯಾಗಿರಬೇಕು. ಮುನಿಗಳ ಆಹಾರ-ವಿಹಾರದಲ್ಲಿ ಸೇವೆ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ನುಡಿದರು.

Advertisement

ಅವರು ಶನಿವಾರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್‌ ಬಾಹುಬಲಿ ಸ್ವಾಮಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆದ ಸಂದರ್ಭ ಮಂಗಲ ಪ್ರವಚನ ನೀಡಿದರು. ಇಂದ್ರಾದಿ ದೇವತೆಗಳು ಮಾತ್ರ ಅಭಿಷೇಕ ಮಾಡುತ್ತಾರೆ. ಬಾಹುಬಲಿ ಸ್ವಾಮಿ ಮೂರ್ತಿಯ ಚರಣ ಸ್ಪರ್ಶ ಮಾಡಿ ಪಾದಾಭಿಷೇಕ ಮಾಡಿ
ದವರೆಲ್ಲ ದೇವತೆಗಳಿಗೆ ಸಮಾನರು ಎಂದರು.

ಕಾರ್ಕಳದ ಜೈನಮಠದ ಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ, ನಮ್ಮ ಭವ್ಯ ಪರಂಪರೆಯೇ ಧರ್ಮವಾಗಿದೆ. ಧರ್ಮ ಮತ್ತು ಸಂಸ್ಕೃತಿಯನ್ನು ಕಡೆ ಗಣಿಸಬಾರದು. ನಮ್ಮ ಆಚಾರ-ವಿಚಾರ ಗಳು ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿದ್ದಾಗ ಮಾತ್ರ ನಾವು ಶಾಂತಿ, ನೆಮ್ಮದಿ ಪಡೆಯಬಹುದು ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಪ್ರೊ| ಎಸ್‌. ಪ್ರಭಾಕರ್‌, ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು.

ಆಹಾರ ದಾನದಿಂದ ಪುಣ್ಯ 
ಸೋಂದಾ ಸ್ವಾದಿ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ನಿತ್ಯವೂ ಮಾಡುವ ಶುಭಾಶುಭ ಕರ್ಮಗಳಿಂದ ಪುಣ್ಯ, ಪಾಪದ ಫಲ ಆತ್ಮನಿಗೆ ಅಂಟಿಕೊಳ್ಳುತ್ತದೆ. ನಮ್ಮನ್ನು ನಾವು ಅರಿತುಕೊಂಡು ಜಪ, ತಪ, ಧ್ಯಾನ ಹಾಗೂ ಸತ್ಕರ್ಮಗಳ ಮೂಲಕ ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಆಹಾರ ದಾನದಿಂದ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

Advertisement

ಮುಂದಿನ ವರ್ಷ ಮಹಾಮಸ್ತಕಾಭಿಷೇಕ
 ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ 2019 ರ ಫೆಬ್ರವರಿಯಲ್ಲಿ ಭಗವಾನ್‌ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಶನಿವಾರ ನಡೆದ ಬಾಹುಬಲಿ ಸ್ವಾಮಿ ಮೂರ್ತಿಯ ಮೂವತ್ತಾರನೇ ವರ್ಷದ ಪ್ರತಿಷ್ಠಾ ಮಹೋತ್ಸವ ವರ್ಧಂತ್ಯುತ್ಸವ ಹಾಗೂ 216 ಕಲಶಗಳಿಂದ ಪಾದಾಭಿಷೇಕ ನಡೆದ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರ ನೇತೃತ್ವ ಹಾಗೂ ದಿವ್ಯ ಉಪಸ್ಥಿತಿಯೊಂದಿಗೆ ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿ
ಷೇಕ ನಡೆಯಲಿದ್ದು ಈಗಾಗಲೇ ತಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

36 ವರ್ಷಗಳ ಹಿಂದೆ ರತ್ನಗಿರಿ ದಟ್ಟ ಕಾಡಾಗಿದ್ದು ಬೆಂಗಳೂರಿನ ಖ್ಯಾತ ಜೋತಿಷಿ ಶಶಿಕಾಂತ ಜೈನ್‌ ಅಂದು ತಿಳಿಸಿದಂತೆ ಈ ಪವಿತ್ರ ಜಾಗ ಪುಣ್ಯ ಭೂಮಿಯಾಗಿ, ತೀರ್ಥ ಕ್ಷೇತ್ರವಾಗಿ ಈಗ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next