ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಆ.14 ರಂದು ಮಂಜುನಾದ -1 ಎಂಬ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ರಚಿತವಾದ ಕೃತಿಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.
ಪ್ರಥಮದಲಿ ವಂದಿಸುವೆ ವಿಘ್ನನಾಶಕನೆ, ಶ್ರೀ ಧ್ವರ್ಮಸ್ಥಳ ಕ್ಷೇತ್ರಾಧಿಪತಿಂ, ಶ್ರೀ ಮಂಜಯನಾಥ ಸ್ವಾಮಿನಂ, ಕಾಮಿನಿ ಕರೆದುತಾರೆ, ಎನಿತು ಜನುಮದ ಪುಣ್ಯದ ಫಲವೋ ಕೃತಿಗಳು ಬಿಡುಗಡೆಯಾದವು.
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಮಣಿಕೃಷ್ಣ ಅಕಾಡಮಿಯಿಂದ ಗೌರವಿಸಲಾಯಿತು. ಡಾ.ರಾಜ್‌ಕುಮಾರ್ ಭಾರತಿಯವರಿಗೆ ಡಾ.ಹೆಗ್ಗಡೆ ಗೌರವಾರ್ಪಣೆ ಮಾಡಿದರು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಮಣಿಕೃಷ್ಣಸ್ವಾಮಿ ಅಕಾಡಮಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಹಿರಿಯ ಸಂಗೀತಜ್ಞರು ಮತ್ತು ಗುರುಗಳಾದ ಡಾ.ರಾಜ್‌ಕುಮಾರ್ ಭಾರತಿ ಉಪಸ್ಥಿತರಿದ್ದರು.
ಮಣಿಕೃಷ್ಣ ಅಕಾಡಮಿ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಪ್ರಾಸ್ತಾವಿಸಿದರು.
ಮಣಿಕೃಷ್ಣ ಅಕಾಡಮಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಎಸ್.ಆರ್. ವಂದಿಸಿದರು. ರಾಮಾಂಜನೇಯ ಉಡುಪಿ, ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಮನ್ವಿ ಮತ್ತು ತಂಡ ಪ್ರಾರ್ಥಿಸಿದರು.
ಇದನ್ನೂ ಓದಿ : ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ : ಮಾಜಿ ಸಚಿವ ವಿನಾಯಕ್ ಮೇಟೆ ನಿಧನ