Advertisement

ಧರ್ಮಸಿಂಗ್‌ ವ್ಯಕ್ತಿತ್ವ ಮಾದರಿ: ಸಚಿವ ಈಶ್ವರ ಖಂಡ್ರೆ

03:14 PM Aug 10, 2017 | Team Udayavani |

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಎನ್‌ .ಧರ್ಮಸಿಂಗ್‌ ಅವರಿಗೆ ಧರ್ಮಸಿಂಗ್‌ ಅವರೇ ಸಾಟಿ. ರಾಜಕೀಯ ಸೇರಿದಂತೆ ಯಾವುದೇ ಮಗ್ಗುಲಿನಿಂದ ನೋಡಿದರೂ ಅವರ ಬದುಕು ಆದರ್ಶವಾಗಿ ನಿಲ್ಲುತ್ತದೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ತಾಲೂಕಿನ ನೆಲೋಗಿ ಗ್ರಾಮದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್‌ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧಿ ಕಾರ ಬಂದಾಗ ಬಹಳ ಜನ ರಾಜಕಾರಣಿಗಳು ಬದಲಾಗುವುದನ್ನು ಕಾಣುತ್ತೇವೆ. ಆದರೆ ಧರ್ಮಸಿಂಗ್‌ ಅವರು ಶಾಸಕ, ಮಂತ್ರಿ ಕೊನೆಗೆ ಮುಖ್ಯಮಂತ್ರಿ ಆದರೂ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜಾತಿ ರಹಿತ ರಾಜಕಾರಣ ಮಾಡಿದ ಅವರ ರಾಜಕೀಯ ಜೀವನ ಪ್ರತಿಯೊಬ್ಬರಿಗೂ ಮಾದರಿ ಎಂದರು.

ಕಳೆದ ನಾಲ್ಕು ದಶಕಗಳ ಕಾಲ ಕ್ಷೇತ್ರಕ್ಕೆ ಹಾಗೂ ಹೈದ್ರಾಬಾದ-ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. 371 (ಜೆ)ನೇ ಕಲಂ ಜಾರಿ, ಫುಡ್‌ಪಾರ್ಕ್‌, ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಅನೇಕ ಮಹತ್ವದ ಯೋಜನೆಗಳು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಸುಲಫಲ ಮಠದ ಡಾ| ಮಹಾಂತ ಶಿವಾಚಾರ್ಯರು, ಸೊನ್ನದ ಡಾ| ಶಿವಾನಂದ ಸ್ವಾಮೀಜಿ, ಶಖಾಪುರದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಆಲೂರಿನ ಕೆಂಚಬಸವೇಶ್ವರ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ದೇವರು, ಗಂವ್ಹಾರನ ಪಾಂಡುರಂಗ ಸ್ವಾಮೀಜಿ, ಫಿರೋಜಾಬಾದ, ಜೇರಟಗಿ,
ಹೊನ್ನಾಳ, ಕೀರಣಗಿ, ಕುರನಳ್ಳಿ ಶ್ರೀ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕರಾದ ರಾಜಶೇಖರ ಪಾಟೀಲ ಹುಮ್ನಾಬಾದ, ಮಾಲೀಕಯ್ಯ ಗುತ್ತೇದಾರ, ಡಾ| ಉಮೇಶ ಜಾಧವ್‌, ಖಮರುಲ್‌ ಇಸ್ಲಾಂ, ಮಧು ಬಂಗಾರಪ್ಪ, ರಹಿಂಖಾನ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ, ಈಶಾನ್ಯ ಸಾರಿಗೆ ಸಂಸ್ಥೆ ಅದ್ಯಕ್ಷ ಇಲಿಯಾಸ್‌ ಸೇಠ ಬಾಗವಾನ, ಕಲಬುರಗಿ ಮೇಯರ್‌ ಶರಣಕುಮಾರ ಮೋದಿ, ಬಿ.ಜಿ.ಜವಳಿ, ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್‌ ಅಧ್ಯಕ್ಷ ರುಕುಂ ಪಟೇಲ ಪೊಲೀಸ್‌ ಪಾಟೀಲ, ಎಪಿಎಂಸಿ ಅಧ್ಯಕ್ಷ ಮಡಿವಾಳಪ್ಪಗೌಡ ಮಾಗಣಗೇರಾ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಬ್ದುಲ್‌ ರಜಾಕ ಮನಿಯಾರ್‌ ಹಾಗೂ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next