Advertisement
ಮೂಡಬಿದಿರೆಯ ಯಕ್ಷಗಾನ ಕಲಿಕಾ ಕೇಂದ್ರ ಧಿಗಿಣ ದಿವಿಜ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರಸಾದ್ ಮೊಗೆಬೆಟ್ಟುರವರಿಂದ ರಚಿಸಲ್ಪಟ್ಟ “ಯೋಧ ಧರ್ಮೋ ವರಂ ಕರ್ಮ’ ಯಕ್ಷಗಾನ ನೃತ್ಯ ರೂಪಕದ ಪ್ರಥಮ ಪ್ರಯೋಗ ಯಶಸ್ವಿಯಾಯಿತು . ರಕ್ಷಿತ್ ಶೆಟ್ಟ ಪಡ್ರೆ ಪ್ರಧಾನ ಭೂಮಿಕೆಯಲ್ಲಿ ,ಸುಮಾರು 30ರಷ್ಟು ಶಿಷ್ಯರ ಸಾಂಗತ್ಯದ ಈ ಪ್ರಸ್ತುತಿ ಜನಮನ ಗೆಲ್ಲುವಲ್ಲಿ ಸಫಲವಾಯಿತು .
Related Articles
Advertisement
ಸಖೀಯರಾಗಿ ಅಶ್ವಥ್ ಆಚಾರ್ಯ ಕೈಕಂಬ ಹಾಗೂ ಶ್ರವಣ ಆಚಾರ್ಯ ಸುರತ್ಕಲ್‌ರವರ ನಿರ್ವಹಣೆ ಉತ್ತಮವಾಗಿತ್ತು .ಮಂದಾರ ಮೂಡಬಿದಿರೆ ಸೇರಿದಂತೆ ಉಳಿದ ಕಲಾವಿದರ ಸಾಂ ಕ ಶ್ರಮವೂ ಪ್ರದರ್ಶನದ ಯಶಸ್ಸಿಗೆ ಪೂರಕವಾಯಿತು . ಹಿಮ್ಮೇಳದಲ್ಲಿ ತೆಂಕು – ಬಡಗು ತಿಟ್ಟುಗಳ ಕಲಾವಿದರ ಸಮನ್ವಯತೆಯನ್ನು ಚೆನ್ನಾಗಿ ಬಳಸಿದ್ದು ಕಂಡು ಬಂತು .ತೆಂಕಿನ ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಗಿರೀಶ್ ರೈ ಕಕ್ಕೆಪದವುರವರು ಸುಶ್ರಾವ್ಯವಾದ ಕಂಠದಿಂದ ಎದ್ದು ಕಂಡರು . ಮದ್ದಲೆಯಲ್ಲಿ ಶ್ರೀಧರ್ ವಿಟ್ಲ ಸಹಕರಿಸಿದರು. ಪದ್ಮನಾಭ ಉಪಾಧ್ಯಾಯರು ಅದ್ಭುತ ಕೈ ಚಳಕದಿಂದ ಕೊನೆಯವರೆಗೂ ಏಳು ಚೆಂಡುಗಳನ್ನು ನುಡಿಸಿ ಮೋಡಿ ಮಾಡಿದರು . ಬಡಗಿನ ಭಾಗವತಿಕೆಯಲ್ಲಿ ಯಕ್ಷಗಾನ ಪ್ರಸಾದ್ ಮೊಗೆಬೆಟ್ಟುರವರ ನಿರ್ವಹಣೆ ಮೆಚ್ಚುಗೆ ಮೂಡಿಸಿತು . ಮದ್ದಲೆಯಲ್ಲಿ ಶಶಿಕುಮಾರ್ ಆಚಾರ್ಯರು ವಿವಿಧ ಶ್ರುತಿಗಳ ಏಳು ಮದ್ದಲೆಗಳ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು .ಚಕ್ರತಾಳದಲ್ಲಿ ರಾಜೇಂದ್ರಕೃಷ್ಣರು ಸಹಕರಿಸಿದರು .
ಪ್ರಾರಂಭದಲ್ಲೇ ಭಾರತ ಮಾತೆಯೊಂದಿಗೆ ವೀರ ಸೈನಿಕರು ಜಯಹೇ ಜಯಹೇ ಭಾರತ ಭಾಗ್ಯವತಿ ಯೋಧರ ಪುಣ್ಯಕ್ಷಿತಿ ಹಾಡನ್ನು ಕಕ್ಕೆಪದವುರವರು ಹಾಡಿದಾಗ ದೇಶಭಕ್ತಿಯ ಅನುಭವ ಮೂಡಿತು . ವಿರೋಧಿ ಸೈನಿಕರನ್ನು ಯಕ್ಷಗಾನದ ಪರಂಪರೆಯ ಐದು ಬಣ್ಣದ ವೇಷಗಳ ಮೂಲಕ ರಂಗಕ್ಕೆ ಬಳಸಿದ್ದುದು ಮೆಚ್ಚುಗೆ ಮೂಡಿಸಿತು . ಅಂಬಿಕೆಯ ನವಜಾತ ಶಿಶುವಾಗಿ ನೈಜ ಶಿಶುವನ್ನೇ ತಂದು ಎತ್ತಿ ಮು¨ªಾಡಿಸಿದ ನಾಟ್ಯವೂ ಮನ ಗೆದ್ದಿತು .
ಶೀರ್ಷಿಕೆ ಪದ್ಯವಾದ ಜಯಹೇ ಜಯಹೇ ಭಾರತ ಭಾಗ್ಯವತಿ , ವಂದೇ ಮಾತರಂ ಪದ್ಯಗಳು ಹೃದ್ಯವಾಗಿತ್ತು . ಅಡಿಯೆ ಮುಂದಿಡೆ ಸ್ವರ್ಗ , ಯೋಧನ ರಮಣಿ ಹಡೆದರೆ ಸ್ವರ್ಗ ಯೋಧನು ರಣದಿ ಮಡಿದರೆ ಸ್ವರ್ಗ , ಗೆಜ್ಜೆ ನಾದ ಹೆಜ್ಜೆ ಮೋದ ಮುಂತಾದ ಪದ್ಯಗಳು ಸನ್ನಿವೇಶಕ್ಕನುಗುಣವಾಗಿ ಹೆಣೆಯಲಾಗಿದೆ .
ಎಂ .ಶಾಂತರಾಮ ಕುಡ್ವ