Advertisement

ಅರಿವು-ಆಚಾರ-ಅನುಭಾವವೇ ಮುಖ್ಯ

05:10 PM Dec 06, 2018 | |

ಧಾರವಾಡ: ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂಬ ಸುಂದರ ಸೂತ್ರದೊಂದಿಗೆ ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮವೇ ಲಿಂಗಾಯತ ಧರ್ಮ ಎಂದು ಸಂಶೋಧಕ ಡಾ| ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

Advertisement

ನಗರದ ಕವಿಸಂನಲ್ಲಿ ಬಸವ ಕೇಂದ್ರ ವತಿಯಿಂದ ಆಯೋಜಿಸಿದ್ದ ಅರಿವಿನ ಅಂಗಳ ಶರಣ ತತ್ವ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಹಾಗೂ ಶರಣೆ ನೀಲಾಂಬಿಕೆ ಅವರ ಶರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ, ಭಾಷೆ, ಸಂಸ್ಕೃತಿಯ ಜೊತೆಗೆ ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳುವಲ್ಲಿ ವಚನಕಾರರು, ಶರಣರು ಅಪಾರವಾದ ಕೊಡುಗೆ ನೀಡಿದ್ದಾರೆ. ಶರಣ ಸಿದ್ಧಾಂತವು ಸರ್ವಕಾಲಿಕ ಸಮಾನತೆ, ಶಾಂತಿ, ಪ್ರೀತಿ, ವಿಶ್ವ ಬಂಧುತ್ವವನ್ನು ಬೋ ಧಿಸುವ ಸರ್ವ ಶ್ರೇಷ್ಠ ಸಿದ್ಧಾಂತವಾಗಿದೆ. ಶರಣ ಚಳವಳಿಯು ಶೋಷಿತರ, ಧಮನಿತರ, ಮೂಲ ನಿವಾಸಿಗಳ, ಮಹಿಳೆಯರ, ಶ್ರಮಿಕರ ಧ್ವನಿಯಾಗಿ ಉದಯಿಸಿ ಲಿಂಗಾಯತ ಧರ್ಮವಾಗಿದೆ ಎಂದರು.

ಬಸವತತ್ವ ಚಿಂತನ-ಮಂಥನ ಕಾರ್ಯಕ್ರಮಗಳು ಇದೀಗ ನಾಡಿನೆಲ್ಲೆಡೆ ಭರದಿಂದ ಸಾಗಿದ್ದು ಇನ್ನೂ ಹೆಚ್ಚು ಪ್ರಚಾರ ಮಾಡಬೇಕಿದೆ. ಸದೃಢ ರಾಷ್ಟ್ರ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಶರಣರ ನಡೆ-ನುಡಿಗಳನ್ನು ಕೇಳುವಂತಾಗಬೇಕು. ಬಸವಾದಿ ಶರಣರು ನಡೆದಾಡಿದ ಅಥವಾ ಅವರ ಐತಿಹಾಸಿಕ ಸ್ಥಳಗಳಲ್ಲಿ ನಾವು ಚಿಂಥನ ಗೋಷ್ಠಿ, ಉಪನ್ಯಾಸ, ವಚನ ವಿಶ್ಲೇಷಣೆ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದರು.

ಸುನಿತಾ ಮೂರಶಿಳ್ಳಿ ಮಾತನಾಡಿದರು. ಬಸವ ಕೇಂದ್ರದ ಉಪಾಧ್ಯಕ್ಷ ಮಲ್ಲಿಕಾರ್ಜುನ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಶಿವಶರಣ ಕಲಬಶೆಟ್ಟರ, ಲಕ್ಷ್ಮೀ ಮುನವಳ್ಳಿ, ರಾಜು ಮರಳಪ್ಪನವರ, ನಾಗರಾಜ ಪಟ್ಟಣಶೆಟ್ಟಿ, ಶಿವಣ್ಣ ಬೆಲ್ಲದ, ವಿದ್ಯಾ ಕುಂದರಗಿ, ಅನಸುಯಾ ಬಿರಾದಾರ, ಬಸಂತಿ ಹಪ್ಪಳದ, ವೀರಣ್ಣ ಒಡ್ಡಿನ ಇದ್ದರು.

Advertisement

ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು. ರವಿಕುಮಾರ ಸ್ವಾಗತಿಸಿದರು. ಅಶೊಕ ನಿಡವಣಿ ವಂದಿಸಿದರು. ಸಮಾರಂಭದಲ್ಲಿ ಮೆಘಾ ಹುಕ್ಕೇರಿ ಮತ್ತು ಶ್ರದ್ಧಾ ಹಾಗೂ ಬಸವರಾಜೇಶ್ವರಿ ಮೂರಶಿಳ್ಳಿ ವಚನ ಸಂಗೀತ ನಡೆಸಿಕೊಟ್ಟರು.

ವಚನಗಳ ಬಗ್ಗೆ ಹಾಗೂ ಶರಣರ ವಿಚಾರಧಾರೆ ಕುರಿತು 770 ಅಮರಗಣಂಗಳವರ ಶರಣೋತ್ಸವ ಕಾರ್ಯಕ್ರಮವನ್ನು ಪ್ರತಿ ತಿಂಗಳು ಆಯೋಜನೆ ಮಾಡಿ ಜನರಲ್ಲಿ ವಚನಗಳ ಅರಿವನ್ನು ಮೂಡಿಸುವ ಅಗತ್ಯವಿದೆ. ಆ ಕೆಲಸವನ್ನು ಮುಂಬರುವ ದಿನಗಳಲ್ಲಿ ಲಿಂಗಾಯತರು ಮಾಡಬೇಕಿದೆ.
. ಡಾ| ವೀರಣ್ಣ ರಾಜೂರ, ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next