Advertisement

ಧಾರವಾಡ: ಮಹಿಮೋತ್ಸವ ಪೂಜಾ ಪ್ರಕರಣ… ತೀರ್ಪು ಕಾಯ್ದಿರಿಸಿದ ಹೈಕೋಟ್೯

09:05 PM Jul 04, 2023 | Team Udayavani |

ಧಾರವಾಡ: ಗಂಗಾವತಿಯ ನವವೃಂದಾವನದ ಶ್ರೀ ಜಯತೀರ್ಥರ ಆರಾಧನೆ ಹಾಗೂ ರಘುವರ್ಯತೀರ್ಥರ ಮಹಿಮೋತ್ಸವ ಪೂಜಾ ಪ್ರಕರಣದ ವಿಚಾರಣೆ ಕೈಗೊಂಡ ಧಾರವಾಡ ಹೈಕೋರ್ಟ್ ಪೀಠವು, ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

Advertisement

ಕೊಪ್ಪಳ್ಳ ಜಿಲ್ಲೆಯ ಗಂಗಾವತಿ ತಾಲೂಕಿನ ನವವೃಂದಾವನದಲ್ಲಿನ ಶ್ರೀ ಜಯತೀರ್ಥರ ಆರಾಧನೆ ಹಾಗೂ ರಘುವರ್ಯತೀರ್ಥರ ಮಹಿಮೋತ್ಸವ ಆಚರಣೆಯಲ್ಲಿ ಎರಡು ಭಕ್ತರ ಗುಂಪುಗಳ ಮಧ್ಯೆ ಪೂಜಾ ವಿವಾದ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಎರಡೂ ಗುಂಪುಗಳಿಗೆ ಪೂಜೆಗೆ ಅವಕಾಶ ನೀಡದೇ ನಿರ್ಬಂಧ ವಿಧಿಸಿ ಜಿಲ್ಲಾಡಳಿತವು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಎರಡು ಭಕ್ತರ ಗುಂಪುಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪೂಜೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ ಏಕಸದಸ್ಯ ಪೀಠವು ಶ್ರೀ ಜಯತೀರ್ಥರ ಹಾಗೂ ರಘುವರ್ಯತೀರ್ಥರ ಭಕ್ತರ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿ, ತೀರ್ಪನ್ನು ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ಪಿರಿಯಾಪಟ್ಟಣದಲ್ಲಿ ಹುಚ್ಚು ನಾಯಿ ದಾಳಿ: ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next