Advertisement

ಧಾರವಾಡ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ : 40 ಲಕ್ಷ ಮೌಲ್ಯದ ಶ್ರೀಗಂಧ ವಶ, ಐವರ ಬಂಧನ

05:27 PM Jan 07, 2021 | Team Udayavani |

ಧಾರವಾಡ: ಬಹಳ ವರ್ಷಗಳ ನಂತರ ಧಾರವಾಡ ಅರಣ್ಯ ಅಧಿಕಾರಿಗಳು ಕಾಡುಗಳ್ಳರ ಭರ್ಜರಿ ಬೇಟೆಯಾಡಿದ್ದು, ಶ್ರೀಗಂಧದ ಮರ ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿ ಐದು ಮಂದಿ ಆರೋಪಿಗಳು ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬಂಧಿತ ಆರೋಪಿಗಳನ್ನು ರಾಯಬಾಗ ತಾಲೂಕಿನವರಾದ ಪರಸಪ್ಪ ಶ್ರೀಕಾಂತ ಭಜಂತ್ರಿ (35) ಮಾರುತಿ ಶ್ರೀಕಾಂತ ಭಜಂತ್ರಿ (26), ಕಲ್ಲಪ್ಪ ಅಪ್ಪಣ್ಣ ಶಿಂದೆ (26), ಮಹದೇವ ಭೀಮಪ್ಪ ಮಾಂಗ (28) ಹಾಗೂ ಮೂಡಲಗಿ ತಾಲೂಕಿನ ರಾಜು ವಿಠ್ಠಲ ಭಜಂತ್ರಿ (34) ಎನ್ನಲಾಗಿದೆ.

ಬಂಧಿತರಿಂದ ನಲವತ್ತು ಲಕ್ಷ ರೂಪಾಯಿ ಮೌಲ್ಯದ 370 ಕೆಜಿ ಶ್ರೀಗಂಧದ ತುಂಡುಗಳು ಹಾಗೂ ಸಾಗಾಟಕ್ಕೆ ಬಳಕೆ ಮಾಡಿದ ಕಾರು ಮತ್ತು ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ನಂ.1… ದೇಶೀ ಮಾರುಕಟ್ಟೆಯಲ್ಲಿ 2.5 ಕೋಟಿ ಗ್ರಾಹಕರನ್ನು ಪಡೆದ ಆ್ಯಕ್ಟಿವಾ ಸ್ಕೂಟರ್

ಪ್ರಕರಣದಲ್ಲಿ ಪೋಲಿಸ್ ಇಲಾಖೆಯವರು ತಾಂತ್ರೀಕ ಸಹಾಯವನ್ನು ನೀಡಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಈ ಭರ್ಜರಿ ಬೇಟೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ರಣತಂತ್ರ ರೂಪಿಸಿದ್ದು , ಯಶಪಾಲ್ ಕ್ಷೀರಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ವಿಭಾಗ ಮತ್ತು ಸಂತೋಷ ಕೆಂಚಪ್ಪನವರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ವಿಭಾಗ ರವರ ಮಾರ್ಗದರ್ಶನದಲ್ಲಿ ಆರ್. ಎಸ್.ಉಪ್ಪಾರ ವಲಯ ಅರಣ್ಯಾಧಿಕಾರಿ ಧಾರವಾಡ ವಲಯ, ಪಿ.ಡಿ.ಮಣಕೂರ, ಎಂ.ಡಿ.ಲಮಾಣಿ, ಜಿ.ಎಮ್,ಕಾಂಬಳೆ, ಸಿ.ಎಸ್.ರೊಟ್ಟಿ, ಅರಣ್ಯ ರಕ್ಷಕರು ಶ್ರೀ ವಿಠ್ಠಲ ಜೋನಿ, ರಘು ಕುರಿಯವರ, ರಂಗಪ್ಪ ಕೋಳಿ, ಕಲ್ಲಪ್ಪ ಕೇಂಗಾರ, ಎಸ್.ಪಿ.ಹಿರೇಮಠ, ಶಿವರಾಂ ಚವ್ಹಾಣ ರಾಜೇಂದ್ರ ಮಗದುಮ್, ಚಾಂದಬಾಷಾ ಮುಲ್ಲಾ, ಹಾಗೂ ಧಾರವಾಡ ವಲಯದ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next