ಧಾರವಾಡ: ಜಿಲ್ಲೆಯಲ್ಲಿ ಕಳೆದ ವರ್ಷಜಾನುವಾರುಗಳಿಗೆ ತೀವ್ರವಾಗಿ ಬಾಧಿಸಿದ್ದಚರ್ಮ ಗಂಟು ರೋಗ ಈ ಸಲ ಮಂಗಮಾಯವಾಗಿದ್ದು, ಇದರ ಜತೆಗೆ ಪ್ರತಿವರ್ಷವೂ ಈ ಸಮಯಕ್ಕೆ ಸರಿಯಾಗಿಜಾನುವಾರುಗಳಲ್ಲಿ ಕಂಡು ಬರುವಕಾಲುಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕರೋಗಗಳ ಬಾಧೆಯೂ ಕೊಂಚ ತಗ್ಗಿದೆ.
ಜಾನುವಾರುಗಳಿಗೆ ಕಳೆದ ವರ್ಷ ಚರ್ಮಗಂಟು ರೋಗ ತೀವ್ರವಾಗಿ ಬಾಧಿಸಿತ್ತು. ಈವರ್ಷವೂ ಇದರ ಆತಂಕದಲ್ಲಿದ್ದ ರೈತರುಈಗ ನಿರಾಳವಾಗಬಹುದು. ಈವರೆಗೂಜಿಲ್ಲೆಯಲ್ಲಿ ಚರ್ಮ ಗಂಟು ರೋಗದಯಾವ ಲಕ್ಷಣವೂ ಕಂಡು ಬಂದಿಲ್ಲ.ಇದರ ಜತೆಗೆ ಬಾಯಿಬೇನೆ, ಕಾಲುಬೇನೆ,ಗಂಟುಬೇನೆ, ಚಪ್ಪೇಬೇನೆ ಸೇರಿದಂತೆಸಾಂಕ್ರಾಮಿಕ ರೋಗಗಳ ಲಕ್ಷಣಗಳೂಕಂಡು ಬಂದಿಲ್ಲ.
ಇದಲ್ಲದೇ ಜಿಲ್ಲೆಯಲ್ಲಿಇದೀಗ ರಾಷ್ಟ್ರೀಯ ಜಾನುವಾರು ರೋಗನಿಯಂತ್ರಣದಡಿ ಬ್ರೂಸ್ಸೆಲ್ಲೊಸಿಸ್ (ಕಂದುರೋಗ) ರೋಗಕ್ಕೆ ಲಸಿಕಾ ಅಭಿಯಾನಶುರು ಮಾಡಲಾಗಿದ್ದು, ಈ ರೋಗದನಿಯಂತ್ರಣಕ್ಕೂ ಮೂರು ಹಂತದಲ್ಲಿ ಲಸಿಕೆಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ತೀವ್ರ ಬಾಧಿಸಿದ್ದ ಚರ್ಮ ಗಂಟು ರೋಗ:ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿಜಿಲ್ಲೆಯ ಗ್ರಾಮೀಣ ಭಾಗದ 168ಗ್ರಾಮಗಳ 1789 ಜಾನುವಾರುಗಳಲ್ಲಿಚರ್ಮ ಗಂಟು ರೋಗ (ಲಂಪಿ ಸ್ಕಿನ್‌ಡಿಸೀಸ್) ಕಾಣಿಸಿಕೊಂಡಿತ್ತು. ಅಕ್ಟೋಬರ್‌ಅಂತ್ಯಕ್ಕೆ ಜಿಲ್ಲೆಯ ಐದು ತಾಲೂಕಿನ 291ಗ್ರಾಮಗಳ 5570 ಜಾನುವಾರುಗಳಲ್ಲಿಪತ್ತೆಯಾಗಿತ್ತು.
ಈ ಪೈಕಿ ಕಲಘಟಗಿತಾಲೂಕಿನ 75, ಧಾರವಾಡ ತಾಲೂಕಿನ72, ಹುಬ್ಬಳ್ಳಿ ತಾಲೂಕಿನ 58, ಕುಂದಗೋಳತಾಲೂಕಿನ 53, ನವಲಗುಂದ ತಾಲೂಕಿನ33 ಗ್ರಾಮಗಳ ಜಾನುವಾರುಗಳಲ್ಲಿ ರೋಗಕಾಣಿಸಿಕೊಂಡಿತ್ತು. ರೋಗ ಹತೋಟಿಗಾಗಿಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆಹಾಗೂ ಸಾಗಾಟ ನಿಷೇಧಿಸಿ ಸೆ.28ರಿಂದಲೇಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ರೋಗಹತೋಟಿಗಾಗಿ ಜಿಲ್ಲೆಗೆ ತರಿಸಿದ್ದ 70 ಸಾವಿರಲಸಿಕೆಯನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಲಾಗಿತ್ತು.ಪರಿಣಾಮ ಪೂರ್ಣ ಪ್ರಮಾಣದಲ್ಲಿ ರೋಗಹತೋಟಿಗೆ ಬಂದಿತ್ತು. ಇದಾದ ಬಳಿಕವೇಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆಹಾಗೂ ಸಾಗಾಟಕ್ಕೆ ಹೇರಿದ್ದ ನಿಷೇಧ ತೆರವುಮಾಡಲಾಗಿತ್ತು.
ಕಂದು ರೋಗಕ್ಕೆ ಲಸಿಕಾಕರಣ: ಕೇಂದ್ರಸರಕಾರದ ನೂತನ ರಾಷ್ಟ್ರೀಯಜಾನುವಾರು ರೋಗ ನಿಯಂತ್ರಣಕಾರ್ಯಕ್ರಮದಡಿ ಜಿಲ್ಲಾದ್ಯಂತ ಕಂದುರೋಗ ನಿಯಂತ್ರಣಕ್ಕಾಗಿ ಮೊದಲಹಂತದ ಲಸಿಕಾ ಕಾರ್ಯಕ್ರಮವನ್ನುಸೆ.6ರಿಂದ ಸೆ.15ರವರೆಗೆ ಕೈಗೊಳ್ಳಲಾಗಿದೆ.ಈ ಅವಧಿಯಲ್ಲಿ 4-8 ತಿಂಗಳ ದನಮತ್ತು ಎಮ್ಮೆ ಹೆಣ್ಣು ಕರುಗಳಿಗೆ ಲಸಿಕೆಹಾಕಲಾಗಿದೆ. ಮೂರು ಹಂತದಲ್ಲಿ ಮೂರುತಿಂಗಳಿಗೊಮ್ಮೆ ಈ ಲಸಿಕಾ ಅಭಿಯಾನಹಮ್ಮಿಕೊಳ್ಳಲು ಅಗತ್ಯ ಲಸಿಕೆಗಳನ್ನುದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ22 ಸಾವಿರ ಕರುಗಳಿಗೆ ಲಸಿಕೆ ಹಾಕುವಗುರಿ ಹೊಂದಲಾಗಿದ್ದು, ಈ ಪೈಕಿ ಮೊದಲಹಂತದ ಲಸಿಕಾಕರಣದಲ್ಲಿ 6 ಸಾವಿರಹೆಣ್ಣು ಕರುಗಳಿಗೆ ಲಸಿಕೆ ಹಾಕಲಾಗಿದೆ.ವರ್ಷದ ಗುರಿ ಮುಟ್ಟಲು ಜಿಲ್ಲೆಯ ಪ್ರತಿತಾಲೂಕಿನಲ್ಲಿ 5-6 ಸಾವಿರ ಲಸಿಕೆ ಹಾಕಲುಸಿದ್ಧತೆ ಕೈಗೊಳ್ಳಲಾಗಿದೆ.
ಶಶಿಧರ್ ಬುದ್ನಿ