Advertisement
ತಂದೆಯ ಮಾರ್ಗದರ್ಶನ: ಶೈಕ್ಷಣಿಕ ಜಿಲ್ಲೆಯಲ್ಲಿ ಮಧುಗಿರಿ ತಾಲೂಕಿನ ಪುರವರ ಹೋಬಳಿ ಬ್ಯಾಲ್ಯ ಎಂಬ ಪುಟ್ಟ ಗ್ರಾಮದಲ್ಲಿ ವರಲಕ್ಷ್ಯಮ್ಮ ಮತ್ತು ಶ್ರೀರಾಮಶೆಟ್ಟಿ ಅವರಿಗೆ ಹಿರಿಯ ಮಗನಾಗಿ ಸೆ.6, 1960ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಓದಿನಲ್ಲಿ ಆಸಕ್ತಿ ಇದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾ ಭ್ಯಾಸವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದರು. ಪಿಯುಸಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ, ಪದವಿಯನ್ನು ಎಇಎಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿ.ಬಿ.ಎಡ್ ವಿದ್ಯಾಭ್ಯಾಸವನ್ನು ಮಧುಗಿರಿಯ ಟಿವಿವಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪೂರೈಸಿ ಶಿಕ್ಷಕರ ವೃತ್ತಿತರಬೇತಿ ಮುಗಿಸಿದರು. ತಂದೆ ಶ್ರೀರಾಮಶೆಟ್ಟಿ ಅವರು ಶಿಕ್ಷಕರಾಗಿದ್ದರಿಂದ ಅವರ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ, ರಾಧಾಕೃಷ್ಣ, ಅಂಬೇಡ್ಕರ್, ಮಹಾತ್ಮಗಾಂಧೀಜಿ, ತತ್ವ ಸಿದ್ಧಾಂತಗಳನ್ನು ಆದರ್ಶವಾಗಿಟ್ಟುಕೊಂಡು ಬೆಳೆದರು.
1 ಗಂಟೆವರೆಗೂ ಹಾಗೂ ಪ್ರತಿ ಶನಿವಾರ 11ರಿಂದ 2ವರೆಗೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು. ಇನ್ನು ರಾಷ್ಟೀಯ ಹಬ್ಬಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಹಾಗೂ ಸಾರ್ವಜನಿಕರು,ಪೋಷಕರು, ಶಾಲಾ ಶಿಕ್ಷಕರು, ಇಲಾಖೆ ಅಧಿಕಾರಿಗಳ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.
Related Articles
Advertisement
ಹೃದಯ ತಪಾಸಣೆ ಚಿಕಿತ್ಸೆ: ಶಿಕ್ಷಕ ಧನ್ಯಕುಮಾರ್ ಮಕ್ಕಳಿಗೋಸ್ಕರ ಅಂದು ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆ ವತಿಯಿಂದ ಉಚಿತವಾಗಿ ಹೃದಯದ ತಪಾಸಣೆ ಕೂಡ ಮಾಡಿಸಿದರು. ಇದರಿಂದ4ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಕಂಡು ಬಂದಿತು. ಇಂತಹ ಮಕ್ಕಳನ್ನು ಗುರುತಿಸಿ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಉಚಿತ ಆಪರೇಷನ್ ಕೂಡ ಮಾಡಿಸಲಾಗಿತ್ತು.
ಪ್ರಶಸ್ತಿ ಪುರಸ್ಕಾರ: ಶಿಕ್ಷಣ ಜ್ಞಾನ ಮಾಸಪತ್ರಿಕೆವತಿಯಿಂದ ಹೊಸದುರ್ಗದಲ್ಲಿ 10ನೇ ವರ್ಷದ(ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು) ಪ್ರಶಸ್ತಿಕೊಟ್ಟು ಗೌರವಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟಲಾಗದ ಪ್ರತಿ ವಿದ್ಯಾರ್ಥಿಗಳಿಗೆ, ಎಲ್ಲ ಲೇಖನಿ ಸಾಮಗ್ರಿಗಳನ್ನು ತಮ್ಮ ದುಡಿಮೆಯಿಂದ ಬಂದ ಸಂಬಳದಿಂದ ನೀಡುತ್ತಿದ್ದರು. ಬಡವರು, ನಿರ್ಗತಿಕರು, ಶಾಲೆಯಿಂದ ಹೊರಗೂಳಿದಮಕ್ಕಳಿಗೂ ಸಹ ಶಾಲಾ ಶುಲ್ಕ ನೀಡಿ, ಅವರ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಮಕ್ಕಳಿಗೆ ಪ್ರೇರಣೆ: ಧನ್ಯಕುಮಾರ್‌ರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತ ಕೂತರೆ ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂತಹ
ಅನುಭೂತಿ. ಸಾಮಾನ್ಯರಂತೆ ಇದ್ದು ನಮ್ಮಲ್ಲಿ ಗುರಿ ಸಾಧಿಸುವ ಛಲ ಹುಟ್ಟಿಸಿದ ಗುರು ಎಂದರೆ ಅವರೇ ನಮ್ಮ ಡಿ.ಎಸ್.ಧನ್ಯಕುಮಾರ್ ಆದರ್ಶ ಶಿಕ್ಷಕರು. 2009ರಲ್ಲಿ ಬಾಲಕಿಯರ ಪ್ರೌಢಶಾಲೆ ಹೊಳವನ ಹಳ್ಳಿಯಲ್ಲಿ 11 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತರಾದರು. ಇವರ ಮಾರ್ಗ ದರ್ಶನದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ, ಶಾಲಾ ಆವರಣದಲ್ಲಿ ಕಾಲುವೆ ಮುಚ್ಚಿಸಿದ್ದು, ಶಾಲಾಭಿವೃದ್ಧಿ, ಮಕ್ಕಳಿಗೆ ಸಲಹೆ ಮತ್ತು ಮಾರ್ಗ ದರ್ಶನ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಜ್ಞ ವೈದ್ಯರಿಂದ ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಸ್ವಚ್ಛತೆ ಬಗ್ಗೆಮಾರ್ಗದರ್ಶನ,ರಾಜ್ಯಮಟ್ಟದಲ್ಲಿ ವಾಲಿಬಾಲ್, ಜಾವೆಲಿನ್ ಎಸೆತ, ರನ್ನಿಂಗ್ ಓಟದಲ್ಲಿ ಭಾಗವಹಿಸು ವಂತೆ ಮಕ್ಕಳಿಗೆ ಪ್ರೇರಣೆ ನೀಡಿದ್ದರು. ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ನನಗೆ ನೈತಿಕ ಮೌಲ್ಯ ಮತ್ತು ಆದರ್ಶ ಗುಣ ಬೆಳೆಸಿದ ಶ್ರೇಷ್ಠ ಗುರು. ನನ್ನ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪ ತೋರಿದ ಗುರುವಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅನಂತ ನಮನ ಸಲ್ಲಿಸುತ್ತೇನೆ.
-ಎಚ್.ಎಂ ಮಂಜುನಾಥ್, ಪತ್ರಿಕಾ
ವಿತರಕ, ಹೊಳವನಹಳ್ಳಿ ನಿವೃತ್ತ ಶಿಕ್ಷಕ ಧನ್ಯಕುಮಾರ್ ಅವರು ಶಿಕ್ಷಕ ವೃತ್ತಿಗೆ ಗೌರವಕೊಟ್ಟಂತಹ ವ್ಯಕ್ತಿ. ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ ಗಳನ್ನು ಬೆಳೆಸಿ ಕೊಟ್ಟಂತಹ ವ್ಯಕ್ತಿ. ವೃತ್ತಿ ಜೀವನ ದಲ್ಲಿ ತರಗತಿಯಲ್ಲಿ ಬೋಧನೆ ಮತ್ತು ಆಡಳಿ ತಾತ್ಮಕ ಜವಾಬ್ದಾರಿ, ವೃತ್ತಿ ಬದ್ಧತೆಕರ್ತವ್ಯ ನಿಷ್ಠೆ ತೋರಿ ಇತರೆ ಶಿಕ್ಷಕರಿಗೆ ಮಾದರಿಯಾದವರು.
-ರುದ್ರೇಶ್, ಅಧ್ಯಕ್ಷರು, ಸರ್ಕಾರಿ ನೌಕರರ
ಸಂಘ, ಕೊರಟಗೆರೆ ತಾಲೂಕು ಧನ್ಯಕುಮಾರ್ ಉತ್ತಮ ಮುಖ್ಯ ಶಿಕ್ಷಕರಾಗಿದ್ದರು. ಇವರು ಶಾಲಾ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪೋಷಕರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಜೊತೆ ಉತ್ತಮ ಸಲಹೆ ಸಂವಹನ, ಮಾರ್ಗ ದರ್ಶನ ಹಾಗೂ ಸಮಾಜಮುಖೀ ಕೆಲಸ ಮಾಡುತ್ತಾ ತಮ್ಮ ಸೇವೆಯಲ್ಲಿ ಪ್ರಾಮಾಣಿಕತೆತೋರಿದ ಮಾದರಿ ಮುಖ್ಯ ಶಿಕ್ಷಕರಾಗಿದ್ದರು.
-ಎನ್.ಎಸ್.ಸುಧಾಕರ್, ಕ್ಷೇತ್ರ
ಶಿಕ್ಷಣಾಧಿಕಾರಿ, ಕೊರಟಗೆರೆ -ಸಿದ್ದರಾಜು ಕೆ.