ಕಳೆದ ವರ್ಷ ರಿಷಿ ನಾಯಕ ನಟನಾಗಿ ಅಭಿನಯಿಸಿದ್ದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ರಿಷಿ ಅವರಿಗೆ ಜೋಡಿಯಾಗಿಧನ್ಯಾ ಬಾಲಕೃಷ್ಣ ಎಂಬ ನವ ಪ್ರತಿಭೆ ನಾಯಕ ನಟಿಯಾಗಿ ಚಂದನವನಕ್ಕೆಪರಿಚಯವಾಗಿದ್ದರು. ತಮ್ಮ ಮೊದಲ ಚಿತ್ರದಲ್ಲೇ ಧನ್ಯಾ ಬಾಲಕೃಷ್ಣಕನ್ನಡದ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
“ಸಾರ್ವಜನಿಕರಿಗೆಸುವರ್ಣಾವಕಾಶ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಚಿತ್ರ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಧನ್ಯಾ ಬಾಲಕೃಷ್ಣ ಹೆಸರು ಆನಂತರ ಯಾವ ಚಿತ್ರಗಳಲ್ಲೂ ಕೇಳಿಬರಲಿಲ್ಲ. ಇದರ ನಡುವೆಯೇ ಧನ್ಯಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಆಗಾಗ್ಗೆ ಹರಿದಾಡುತ್ತಿದ್ದರೂ, ಈ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ಲಭ್ಯವಾಗಿರಲಿಲ್ಲ. ಇದೀಗ ಧನ್ಯಾ ಬಾಲಕೃಷ್ಣ ಮತ್ತೂಂದುಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೇ ನಟ ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ “ಟ್ವೆಂಟಿ ಟ್ವೆಂಟಿ’ ಎಂದು ಹೆಸರಿಡಲಾಗಿದ್ದು, ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಈಗ ಚಿತ್ರದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಔಟ್ ಆ್ಯಂಡ್ ಔಟ್‌ಕಾಮಿಡಿ ಕಥಾನಕ ಹೊಂದಿರುವ ಈ ಚಿತ್ರದ ಮೂಲಕಕೋಮಲ್ ಮತ್ತೆ ತಮ್ಮ ಕಾಮಿಡಿ ಗೆಟಪ್‌ಗೆ ಹಿಂದಿರುಗುವ ಸುಳಿವು ನೀಡಿದ್ದಾರೆ. ಉಳಿದಂತೆ ಚಿತ್ರದ ನಾಯಕಿ ಧನ್ಯಾ ಬಾಲಕೃಷ್ಣ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು, ಚಿತ್ರತಂಡಕ್ಕೆ ಯಾವಾಗ ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಗೊತ್ತಾಗಬೇಕಿದೆ.
– ಜಿ. ಎಸ್. ಕಾರ್ತಿಕ ಸುಧನ್