Advertisement

ಧನ್ವೀರ್‌ ‘ವಾಮನ’ ಚಿತ್ರೀಕರಣ ಪೂರ್ಣ

11:14 AM Feb 10, 2023 | Team Udayavani |

ನಟ ಧನ್ವೀರ್‌ ನಟನೆಯ ಬಹುನಿರೀಕ್ಷಿತ ಚಿತ್ರ “ವಾಮನ’ ಚಿತ್ರೀಕರಣ ಪೂರ್ಣ ಗೊಂಡಿದ್ದು, ಬಿಡುಗಡೆಯತ್ತ ಹೆಜ್ಜೆಹಾಕುತ್ತಿದೆ.ಯುವ ನಿರ್ದೇಶಕ ಶಂಕರ್‌ ರಮಣ ರಚಿಸಿ ನಿರ್ದೇಶಿಸಿರುವ ಮೊದಲ ಚಿತ್ರ “ವಾಮನ’ಕ್ಕೆ “ಈಕ್ವಿನಾಕ್ಸ್‌ ಗ್ಲೋಬಲ್‌ ಎಂಟರ್‌ ಟೈನ್ಮೆಂಟ್‌ ‘ಬ್ಯಾನರ್‌ ಅಡಿಯಲ್ಲಿ ಚೇತನ್‌ ಗೌಡ ನಿರ್ಮಾಣ ಮಾಡಿದ್ದಾರೆ.

Advertisement

ನಿರ್ದೇಶಕ ಶಂಕರ್‌ ಮಾತನಾಡಿ, “ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಹೀರೊ ಇಂಟ್ರೋಡಕ್ಷನ್‌ ಹಾಡಿನ ಚಿತ್ರೀಕರಣ ಮೂಲಕ ಕುಂಬಳಕಾಯಿ ಒಡೆಯುತ್ತಿದ್ದೇವೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದೆ. ಚಿತ್ರದಲ್ಲಿ ಧನ್ವೀರ್‌ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರದ ಹೆಸರು ಗುಣ. ಅದರಂತೆ ಅವರ ಪಾತ್ರ ಒಳ್ಳೆಗುಣ, ಕೆಟ್ಟ ಗುಣ ಎರಡೂ ಇದೆ’ ಎಂದರು.

ನಿರ್ಮಾಪಕ ಚೇತನ್‌ ಗೌಡ ಮಾತನಾಡಿ, “ನಮ್ಮ ನಿರ್ಮಾಣ ಸಂಸ್ಥೆಯ ಮೊದಲ ಕೊಡುಗೆ ವಾಮನ. 72 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ರಿಲೀಸ್‌ ಬಗ್ಗೆ ಹೇಳಲು ಮುಂದಿನ ದಿನಗಳಲ್ಲಿ ಒಂದು ದೊಡ್ಡ ಅನೌನ್ಸ್‌ ಮೆಂಟ್‌ ಮಾಡುತ್ತೇವೆ’ ಎಂದರು.

ಇದನ್ನೂ ಓದಿ:ಟರ್ಕಿ-ಸಿರಿಯಾದಲ್ಲಿ ಭಾರತದ ಆಪರೇಶನ್ ದೋಸ್ತ್; ಮಹಿಳಾ ಅಧಿಕಾರಿಗೆ ಟರ್ಕಿಶ್ ಮಹಿಳೆಯ ಕೃತಜ್ಞತೆ

ನಟ ಧನ್ವೀರ ಮಾತನಾಡಿ, “ನನ್ನ ಕೈವಾ ಹಾಗೂ ವಾಮನ ಚಿತ್ರಗಳು ಒಟ್ಟಿಗೆ ಆರಂಭವಾದ ಚಿತ್ರಗಳು. ಆದರೆ ವಾಮನ ಬೇಗ ಮುಗಿಯುತ್ತಿದ್ದು, ಮೊದಲು ಬಿಡುಗಡೆಯಾಗಲಿದೆ. ಒಂದು ಒಳ್ಳೆ ಕಥೆ, ಕಲಾ ವಿದರು, ತಂತ್ರಜ್ಞರ ಜೊತೆ ಚಿತ್ರ ಮಾಡಿರುವುದಕ್ಕೆ ಖುಷಿಯಿದೆ’ ಎಂದರು.

Advertisement

“ವಾಮನ’ ಚಿತ್ರತಂಡ, ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಚಿತ್ರಕ್ಕೆ ಮಹೇನ್‌ ಸಿಂಹ ಛಾಯಾಗ್ರಹಣ, ಬಿ.ಅಜನೀಶ್‌ ಲೋಕನಾಥ್‌ ಸಂಗೀತ, ಸುರೇಶ್‌ ಆರ್ಮುಗಂ ಸಂಕಲನ ಚಿತ್ರಕ್ಕಿದೆ.

ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next