Advertisement

ಬಜಾರ್‌ ನಿರೀಕ್ಷೆಯಲ್ಲಿ ಧನ್ವೀರ್‌

12:30 AM Jan 11, 2019 | |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸುನಿ ನಿರ್ದೇಶನದ “ಬಜಾರ್‌’ ಚಿತ್ರ ಇಂದು ತೆರೆಕಾಣಬೇಕಿತ್ತು. ಚಿತ್ರತಂಡ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ, ಚಿತ್ರದ ಬಿಡುಗಡೆ  ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ಟ್ರೇಲರ್‌ವೊಂದನ್ನು ಬಿಡುಗಡೆ ಮಾಡಿದ್ದು, ಟ್ರೇಲರ್‌ ನೋಡಿದವರು ಈ ಚಿತ್ರದ ಮೂಲಕ ಹೊಸ ಹುಡುಗ ಧನ್ವೀರ್‌ ಚಿತ್ರರಂಗದಲ್ಲಿ ನೆಲೆನಿಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ಧನ್ವೀರ್‌ಗೂ ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ವಿಶ್ವಾಸವಿದೆ. ಚಿತ್ರದ ಬಗ್ಗೆ ಮಾತನಾಡುವ ಧನ್ವೀರ್‌,  ‘ತುಂಬಾ ಎಕ್ಸೆ„ಟ್‌ ಆಗಿದ್ದೇನೆ. ಮೊದಲ ಸಿನಿಮಾನಾ ಜನ ಹೇಗೆ ತಗೋತ್ತಾರೆ ಎಂಬ ಕುತೂಹಲ ಇದೆ. ಈಗಾಗಲೇ ಟೀಸರ್‌, ಟ್ರೇಲರ್‌ ಬಿಡುಗಡೆಯಾಗಿದೆ. ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಮೂಲಕ ಆ್ಯಕ್ಷನ್‌ ಹೀರೋ ಆಗುತ್ತಿದ್ದೇನೆ. ಅದಕ್ಕೆ ಕಾರಣ ಚಿತ್ರದ ಕಥೆ. ಕಥೆಯಲ್ಲಿ ರೌಡಿಸಂ ಅಂಶ ಅಡವಾಗಿರುವುದರಿಂದ ಅದಕ್ಕೆ ತಕ್ಕಂತಹ ಪಾತ್ರ ಸಿಕ್ಕಿದೆ. ಹೊಸ ತರಹದ ಕಥೆ ಪಾತ್ರ ಈ ಚಿತ್ರದಲ್ಲಿದೆ’ ಎನ್ನುವುದು ಧನ್ವೀರ್‌ ಮಾತು. ಚಿತ್ರವನ್ನು ಭಾರತಿ ಫಿಲಂಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅದಿತಿ ನಾಯಕಿ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next