Advertisement

ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಯತ್ತ ಧನುಷಾ

06:32 AM May 31, 2019 | Team Udayavani |

ಕೆ.ಆರ್‌.ನಗರ: ಅಕ್ಕನ ಕ್ರೀಡಾ ಸ್ಫೂರ್ತಿಯನ್ನು ಸವಾಲಾಗಿ ಸ್ವೀಕರಿಸಿದ ಆಟೋ ಚಾಲಕರೊಬ್ಬರ ಪುತ್ರಿ, ಈಗ ವಿವಿಗಳ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಹಿರಿಮೆ ಸಾರಲು ಹೊರಟಿದ್ದಾರೆ.

Advertisement

ಮೈಸೂರು ಜಿಲ್ಲೆಯ ಕೆ.ಆರ್‌.ನಗರ ಪಟ್ಟಣದ ಮೀನಾಕ್ಷಿಪುರಂ ಬಡಾವಣೆ ಆಟೋ ಚಾಲಕ ಮಂಜು ಹಾಗೂ ರುಕ್ಮಿಣಿ ದಂಪತಿಯ ಪುತ್ರಿ ಎಂ.ಆರ್‌.ಧನುಷಾ ಎಂಬಾಕೆ ಹಳ್ಳಿಯಿಂದ ದಿಲ್ಲಿಯವರೆಗೆ ಆಟವಾಡುವ ಎತ್ತರಕ್ಕೆ ಬೆಳೆದಿರುವ ಸ್ಫೂರ್ತಿದಾಯಕ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಕಳೆದ 7 ವರ್ಷಗಳಿಂದ ವಿದ್ಯಾಭ್ಯಾಸದೊಂದಿಗೆ ಕ್ರೀಡೆೆಯನ್ನು ಸ್ಫೂರ್ತಿಯಾಗಿಸಿಕೊಂಡ ಪ್ರತಿಭೆ ಈಗ ದೇಶದಿಂದಾಚೆಗೂ ತನ್ನ ಸಾಧನೆ ಮುಂದುವರಿಸಲು ಮುಂದಾಗಿದ್ದಾರೆ. ಆರಂಭದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಧನುಷಾ ದ್ಯಾನ ನಗರದಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ನಂತರ ಬೆಂಗಳೂರಿನ ರೇವಾ ಕಾಲೇಜಿನಲ್ಲಿ ತನ್ನ ಉನ್ನತ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 100ಮೀ ಓಟಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದ್ದ ಅಕ್ಕ ಅನುಷಾಳ ಸಾಧನೆ ಸ್ಫೂರ್ತಿ ಪಡೆದ ಧನುಷಾ, ತಾನೂ ಕ್ರೀಡೆಯಲ್ಲಿ ಸಾಧನೆ ಮಾಡಲು ಮನಸ್ಸು ಮಾಡಿ ಸಾಧನೆ ಹಾದಿಯಲ್ಲಿ ಸಾಗಿದ್ದಾರೆ.

ಪ್ರಾಥಮಿಕವಾಗಿ ಮಂಡ್ಯ ಜಿಲ್ಲೆ ಆದಿಚುಂಚನಗಿರಿಯಲ್ಲಿ ನಡೆದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಈಕೆ, ಹೆಪಾrಥ್ಲಾನ್‌ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮಳಾಗಿ ಗೆಲುವು ಸಾಧಿಸಿದರು. ಕಳೆದ ನವೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆಯಲ್ಲಿ ನಡೆದ ಆಲ್‌ ಇಂಡಿಯಾ ಹೆಪಾrಥ್ಲಾನ್‌ ಕ್ರೀಡೆಯಲ್ಲಿ ಪ್ರಥಮಳಾಗಿ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಆಯ್ಕೆ ಸುತ್ತಿಗೆ ಸೇರ್ಪಡೆಯಾಗಿದ್ದಾರೆ.

Advertisement

ಇದಾದ ಬಳಿಕ ಕಳೆದ ಮಾರ್ಚ್‌ನಲ್ಲಿ ಒಡಿಶಾದಲ್ಲಿ ನಡೆದ ಅಂತಾರಾಷ್ಟ್ರೀಯ ವಿವಿಗಳ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಮಾತ್ರವಲ್ಲದೆ 20 ವರ್ಷ ವಯಸ್ಸಿನವರ ಹೆಪಾಥ್ಲಾನ್‌ ಕ್ರೀಡಾಪಟುಗಳ 20ರಲ್ಲಿ ಪ್ರಥಮರಾಗಿ ಸ್ಥಾನ ಪಡೆಯುವ ಮೂಲಕ ಮೈಸೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಯತ್ನ: ಅಕ್ಕನಿಂದ ಸ್ಫೂರ್ತಿಯ ಜತೆಗೆ ಆರಂಭದ ತರಬೇತುದಾರರಾದ ಅಶೋಕ್‌.ಬಿ.ಮಂಥರಾ, ಪುನೀತ್‌ ಅವರ ತರಬೇತಿಯಿಂದ ಈ ಸಾಧನೆ ಸಾಧ್ಯವಾಯಿತು. ತನಗಿಂತ ದುಪ್ಪಟ್ಟು ಬಲ ಹೊಂದಿರುವ ಪುರುಷರೊಂದಿಗೆ ಕ್ರೀಡಾಭ್ಯಾಸವನ್ನು ನಡೆಸಿದ್ದು, ಗೆಲುವಿನ ದಾರಿ ಸೇರಲು ಸಹಾಯವಾಯಿತು ಎಂದು ತನ್ನ ಸಾಧನೆ ಹಿಂದಿನ ರಹಸ್ಯ ತೆರೆದಿಟ್ಟಿದ್ದಾರೆ.

ಏಳಕ್ಕೂ ಸಾಮರ್ಥ್ಯ, ಶಕ್ತಿಯೇ ಬಲ: ಹೆಪಾಥ್ಲಾನ್‌ ಎಂದರೆ ಏಳು ಆಟಗಳನ್ನು ಒಂದೇ ಸ್ಪರ್ಧೆಯಲ್ಲಿ ಎದುರಿಸುವುದು. ಏಳು ಆಟಗಳ ಸಾಮರ್ಥ್ಯಗಳನ್ನು ಅರಿತು ಬಲದ ಶಕ್ತಿ ಜತೆಗೆ ಬುದ್ಧಿವಂತಿಕೆ ಪಣಕ್ಕಿಟ್ಟು ಸ್ಪರ್ಧೆ ಗೆಲ್ಲುವುದು ನಿಜಕ್ಕೂ ಸಾಹಸಮಯ. ಧನುಷಾ ಅವರೂ ಸಹ 100ಮೀ ಹರ್ಡಲ್ಸ್‌, ಎತ್ತರ ಜಿಗಿತ, ಗುಂಡು ಎಸೆತ, 200ಮೀ ಓಟ, ಉದ್ದ ಜಿಗಿತ, ಜಾವೆಲಿನ್‌ ಥ್ರೋ ಮತ್ತು ಕೊನೆಯದಾಗಿ 800ಮೀ ಓಟದ ಸ್ಪರ್ಧೆಯಾಗಿದೆ. ಅಲ್ಲಿಯೂ ಮೈಸೂರಿನ ಕೀರ್ತಿ ಪತಾಕೆ ಹಾರಿಸಲಿ ಎಂಬುದೇ ಎಲ್ಲರ ಶುಭ ಹಾರೈಕೆಯಾಗಿದೆ.

ಒಲಂಪಿಕ್‌ ಸ್ಪರ್ಧೆ ಗೆಲ್ಲುವ ಕನಸಿದೆ: ಸದ್ಯದ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದೇನೆ. ಆದರೆ, ಒಲಂಪಿಕ್‌ನಲ್ಲಿ ಭಾಗವಹಿಸಿ ದೇಶಕ್ಕೆ ಚಿನ್ನ ತಂದು ಕೊಡಬೇಕೆಂಬ ಬಹು ದೊಡ್ಡ ಕನಸು ನನಗಿದೆ. ಇದಕ್ಕಾಗಿ ಇನ್ನಿಲ್ಲದ ತರಬೇತಿಯನ್ನು ವಿಶ್ವವಿದ್ಯಾಲಯಗಳ ಸಹಕಾರದಿಂದ ಪಡೆಯುತ್ತಿದ್ದೇನೆ. ತಂದೆ ಬಡ ಕುಟುಂಬದಿಂದ ಬಂದಿರುವುದರಿಂದ ದೇಶಕ್ಕೆ ತೆರಳುವ ಖರ್ಚು ವಿಶ್ವವಿದ್ಯಾಲಯ ನೀಡುತ್ತಿದೆ. ಮತ್ತಷ್ಟು ಸಹಕಾರದ ಅವಶ್ಯಕತೆಯೂ ನನಗಿದೆ. ಆದರೂ ಸಾಧನೆ ಮಾಡಬೇಕೆಂಬ ಹಂಬಲ ಅದಕ್ಕಿಂತ ಹೆಚ್ಚಿದೆ ಎಂದು ಸಾಧಕಿ ಎಂ.ಆರ್‌.ಧನುಷಾ ತಿಳಿಸಿದ್ದಾರೆ.

ಬೆಂಬಲವಾಗಿ ನಿಂತ ವಿವಿ: ಧನುಷಾ ಅವರ ಕ್ರೀಡಾ ಸಾಧನೆಗೆ ಬೆಂಬಲವಾಗಿ ಮೈಸೂರು ವಿವಿ ಆರ್ಥಿಕ ಸಹಕಾರ ನೀಡುವ ಮೂಲಕ ಬೆಂಬಲವಾಗಿ ನಿಂತಿದೆ. ಸದ್ಯ ಮುಂಬರುವ ಜುಲೈನಲ್ಲಿ ಇಟಲಿ ದೇಶದ ನೆಪೋಲಿಯಾದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಮಟ್ಟದ ವಿವಿಗಳ ಕ್ರೀಡಾಕೂಟದಲ್ಲಿ ಭಾಗವಸಲು ಸಿದ್ಧತೆ ನಡೆಸಿದ್ದಾರೆ.

* ಜಿ.ಕೆ.ನಾಗಣ್ಣಗೇರದಡ

Advertisement

Udayavani is now on Telegram. Click here to join our channel and stay updated with the latest news.

Next