Advertisement

ಜನ್ ‘ಧನು’ ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

10:35 AM Apr 23, 2021 | Team Udayavani |

ನಟ ಡಾಲಿ ಧನಂಜಯ್‌ ಈಗ ಕನ್ನಡಕ್ಕಷ್ಟೇ ಸೀಮಿತನಾದ ನಟನಲ್ಲ. ಕನ್ನಡದ ಜೊತೆ ತೆಲುಗು, ತಮಿಳು, ಮಲೆಯಾಳಂ ಸಿನಿ ಪ್ರೇಕ್ಷಕರಿಗೂ ಧನಂಜಯ್‌ ಪರಿಚಿತ ನಟ. ಸದ್ಯ ಧನಂಜಯ್‌ ಅಭಿನಯಿಸುತ್ತಿರುವ ಬಹುತೇಕ ಸಿನಿಮಾಗಳು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ನಿರ್ಮಾಣವಾಗುತ್ತಿದೆ.

Advertisement

“ಟಗರು’ ಸಿನಿಮಾ ಬಿಡುಗಡೆಯ ನಂತರ ಸಹಜವಾಗಿಯೇ ಹೊಸಥರದ ಪಾತ್ರಗಳು ಧನಂಜಯ್‌ ಅವರನ್ನು ಹುಡುಕಿಕೊಂಡು ಬಂದವು. ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳ ನಿರ್ಮಾಪಕರು ಮತ್ತು ನಿರ್ದೇಶಕರ ಗಮನಸೆಳೆದಿದ್ದರಿಂದ, ಧನಂಜಯ್‌ ಅವರಿಗೆ ಬೇರೆ ಬೇರೆ ಭಾಷೆಗಳಲ್ಲೂ ಅವಕಾಶಗಳು ಬರೋದಕ್ಕೆ ಶುರುವಾಯ್ತು.

ಈ ಬಗ್ಗೆ ಮಾತನಾಡುವ ಧನಂಜಯ್‌, “”ಟಗರು’ ಸಿನಿಮಾದ ಬಳಿಕ ಒಂದಷ್ಟು ಹೊಸಥರದ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದವು. ಕನ್ನಡದ ಜೊತೆ ತೆಲುಗು, ತಮಿಳು, ಮಲೆಯಾಳಂನಲ್ಲೂ ಒಳ್ಳೆಯ ಪಾತ್ರಗಳು ಬಂದವು. ರಾಮ್‌ ಗೋಪಾಲ್‌ ವರ್ಮ ಅವರ “ಭೈರವಗೀತ’ ಅದರಲ್ಲಿ ಮೊದಲನೆಯದು. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ಬಂದ “ಭೈರವಗೀತ’ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲದಿದ್ದರೂ, ತೆಲುಗಿನಲ್ಲಿ ನನಗೆ ಒಳ್ಳೆಯ ಓಪನಿಂಗ್‌ ಸಿಕ್ಕಿತು. ತೆಲುಗು ಆಡಿಯನ್ಸ್‌ಗೆ ನನ್ನ ಪರಿಚಯವಾಯ್ತು. ಅದಾದ ಬಳಿಕ ತೆಲುಗಿನಲ್ಲೂ ಆಫ‌ರ್ ಬರೋದಕ್ಕೆ ಶುರುವಾಯ್ತು’ ಎನ್ನುತ್ತಾರೆ ಧನಂಜಯ್‌.

ಇದನ್ನೂ ಓದಿ:ಲೆಕ್ಕಾಚಾರ ಉಲ್ಟಾಪಲ್ಟಾ: ಚೇತರಿಕೆಯ ಮೊದಲೇ ಸಿನಿ ಮಂದಿಯ ಕನಸು ನುಂಗಿದ ಕೊರೋನಾ

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್‌ ನಿರ್ದೇಶನದ, ಅಲ್ಲು ಅರ್ಜುನ್‌ ನಾಯಕನಾಗಿರುವ “ಪುಷ್ಪಾ’ ಸಿನಿಮಾದಲ್ಲಿ ಧನಂಜಯ್‌ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಧನಂಜಯ್‌, “ಸುಕುಮಾರ್‌ ಅವರಂಥ ಕ್ರಿಯೇಟಿವ್‌ ಡೈರೆಕ್ಟರ್‌ ಜೊತೆ ಕೆಲಸ ಮಾಡೋದೆ ಒಂದು ಡಿಫ‌ರೆಂಟ್‌ ಎಕ್ಸ್‌ಪೀರಿಯನ್ಸ್‌. “ಪುಷ್ಪಾ’ ಸಿನಿಮಾದಲ್ಲಿ ಕಂಪ್ಲೀಟ್‌ ನೆಗೆಟಿವ್‌ ಶೇಡ್‌ ಕ್ಯಾರೆಕ್ಟರ್‌ ಇದೆ. ಇದರ ಹಿಂದೆಯೇ ಇನ್ನೂ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ ಧನಂಜಯ್‌.

Advertisement

ಸದ್ಯ ಕನ್ನಡದಲ್ಲಿ ಧನಂಜಯ್‌ ಅಭಿನಯದ “ಸಲಗ’, “ಬಡವ ರಾಸ್ಕಲ್‌’, “ರತ್ನನ್‌ ಪ್ರಪಂಚ’, “ಶಿವಪ್ಪ’, “ಮಾನ್ಸೂನ್‌ ರಾಗ’, “ಹೆಡ್‌ ಆ್ಯಂಡ್‌ ಬುಷ್‌’ ಹೀಗೆ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ವರ್ಷ ಆರಂಭದಲ್ಲಿಯೇ ನಟ ಧನಂಜಯ್‌ “ಪೊಗರು’ ಮತ್ತು “ಯುವರತ್ನ’ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ. “ಈ ವರ್ಷ ನಾನು ಅಭಿನಯಿಸಿದ್ದ “ಪೊಗರು’ ಮತ್ತು “ಯುವರತ್ನ’ ಸಿನಿಮಾಗಳು ರಿಲೀಸ್‌ ಆಗಿವೆ. ಎರಡೂ ಸಿನಿಮಾಗಳಲ್ಲೂ ಸ್ಕ್ರೀನ್‌ ಸ್ಪೇಸ್‌ ಕಡಿಮೆಯಿದ್ರೂ, ಜನ ನನ್ನ ಪಾತ್ರವನ್ನ ತುಂಬಾ ಎಂಜಾಯ್‌ ಮಾಡಿದ್ರು. ಒಬ್ಬ ನಟನಾಗಿ ನಾನು ಹೀರೋ ಕ್ಯಾರೆಕ್ಟರ್‌ ಮಾಡ್ತೀನಾ ಅಥವಾ ವಿಲನ್‌ ಕ್ಯಾರೆಕ್ಟರ್‌ ಮಾಡ್ತೀನಾ ಅನ್ನೋದಕ್ಕಿಂತ, ಆಡಿಯನ್ಸ್‌ಗೆ ರೀಚ್‌ ಆಗುವಂಥ ಕ್ಯಾರೆಕ್ಟರ್‌ ಮಾಡ್ತೀನಾ ಅನ್ನೋದು ನನಗೆ ಮುಖ್ಯವಾಗುತ್ತದೆ. ಆ ಮಟ್ಟಿಗೆ ಹೇಳ್ಳೋದಾದ್ರೆ, ಈ ವರ್ಷದ ಆರಂಭದಲ್ಲೇ, ಈ ಎರಡೂ ಸಿನಿಮಾಗಳಲ್ಲಿ ಜನರಿಗೆ ರೀಚ್‌ ಆಗಿದ್ದೇನೆ. ನನ್ನ ಕ್ಯಾರೆಕ್ಟರ್‌ ಆಡಿಯನ್ಸ್‌ ಜೊತೆ ಇಂಟರ್ಯಾಕ್ಟ್ ಮಾಡಿದೆ’ ಎನ್ನುತ್ತಾರೆ ಧನಂಜಯ್‌.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next