ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ ಬಂದಿವೆ. ಆ ಸಾಲಿಗೆ ಈಗ “ಜಯರಾಜ್’ಬಯೋಪಿಕ್ ಕೂಡ ಸೇರಿದೆ. ಹೌದು, ಧನಂಜಯ್ ಈ ಚಿತ್ರದ ಪ್ರಮುಖ ಆಕರ್ಷಣೆ. ಈಗಾಗಲೇ ಈ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಲಾಕ್‌ಡೌನ್ ಬಳಿಕ ಶೂಟಿಂಗ್‌ಗೆ ಅನುಮತಿ ಸಿಕ್ಕರೆ, ಧನಂಜಯ್ ಚಿತ್ರದ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಅಂದಹಾಗೆ, ಧನಂಜಯ್, “ಜಯರಾಜ್’ ಬಯೋಪಿಕ್‌ಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇದೊಂದು ರೌಡಿಸಂ ಹಿನ್ನೆಲೆಯ ಕಥೆ ಆಗಿರುವುದರಿಂದ ಧನಂಜಯ್ ಬಾಡಿಬಿಲ್ಡ್ ಕೂಡ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಸಮಯ ಸಿಕ್ಕಿದ್ದರಿಂದ ಧನಂಜಯ್, ತಮ್ಮ ದೇಹವನ್ನು ಮತ್ತಷ್ಟು ಸದೃಢಗೊಳಿಸಿಕೊಂಡಿದ್ದಾರೆ. “ಟಗರು’ ಮತ್ತು “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಗಳ ಮೂಲಕ ಧನಂಜಯ್ ಸಾಕಷ್ಟು ಸುದ್ದಿಯಾಗಿದ್ದು ಗೊತ್ತೇ ಇದೆ.
ಪಕ್ಕಾ ಮಾಸ್ ಪಾತ್ರಕ್ಕೆ ಸೈ ಎನಿಸಿಕೊಂಡಿರುವ ಧನಂಜಯ್, ಇದೀಗ ಜಯರಾಜ್ ಬಯೋಪಿಕ್‌ನಲ್ಲೂ ರಗಡ್ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶೂನ್ಯ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಜಯರಾಜ್ ಪುತ್ರ ಅಜಿತ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಈ ಚಿತ್ರದ ಹಿಂದೆ ಅಗ್ನಿಶ್ರೀಧರ್ ಇದ್ದಾರೆ.
ಅಗ್ನಿಶ್ರೀಧರ್ ಅವರು ಚಿತ್ರದ ಕಥೆ, ಚಿತ್ರಕಥೆ ಮಾಡಿದ್ದಾರೆ. ಹಿಂದೆ ಕೂಡ ಅಗ್ನಿಶ್ರೀಧರ್ “ಆ ದಿನಗಳು’ ಮತ್ತು “ಎದೆಗಾರಿಕೆ’ ಚಿತ್ರಗಳ ಹಿಂದೆ ನಿಂತಿದ್ದರು. ಆ ಎರಡು ಸಿನಿಮಾಗಳು ಭರ್ಜರಿ ಯಶಸ್ಸು ಪಡೆದಿದ್ದು ಗೊತ್ತೇ ಇದೆ. ಈಗ ಜಯರಾಜ್ ಬಯೋಪಿಕ್ ಹಿಂದೆ ಇದ್ದಾರೆ. ಇಲ್ಲಿ ಧನಂಜಯ್ ಅವರು ಅಂಡರ್‌ವರ್ಲ್ಡ್ ಕಥೆ ಸಿನಿಮಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯೂ ಹೆಚ್ಚಿದೆ.
ಸದ್ಯಕ್ಕೆ ಧನಂಜಯ್ ಈ ಚಿತ್ರದ ಮೇಲೆ ಗಮನಹರಿಸಿದ್ದು, ಪಾತ್ರಕ್ಕಾಗಿಯೇ ಅವರು ಪಕ್ವಗೊಳ್ಳುತ್ತಿದ್ದಾರೆ. ಎಲ್ಲವೂ ನೈಜತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಸ್ಕ್ರಿಪ್ಟ್ಗೆ ಏನೆಲ್ಲಾ ಬೇಕೋ ಹಾಗೆ ಕಾಣಿಸಿಕೊಳ್ಳುವ ಸಲುವಾಗಿ ರೆಡಿಯಾಗುತ್ತಿರುವುದು ಅವರ ಫ್ಯಾನ್ಸ್‌ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.