ಸಾಮೂಹಿಕವಾಗಿ ಧಮ್ಮ ದೀಕ್ಷೆಯತ್ತ ಒಲವು ತೋರಿದಲ್ಲಿ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಬೌದ್ಧ ಸಾಹಿತಿ ದೇವೇಂದ್ರ ಹೆಗಡೆ ಅಭಿಪ್ರಾಯಪಟ್ಟರು.
Advertisement
ನಗರದಲ್ಲಿ ಫೆ.28 ರಂದು ನಡೆಯಲಿರುವ ಕಲಬುರಗಿ ವಿಭಾಗ ಮಟ್ಟದ ಬೌದ್ಧ ದೀಕ್ಷಾ ಮತ್ತು ಚಿಂತನಾ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ವೈಜ್ಞಾನಿಕ ಬೆಳಕು, ವೈಚಾರಿಕ ಪ್ರಜ್ಞೆ ಮತ್ತು ಮಾನವೀಯ ಅನುಕಂಪದ ತಳಹದಿ ಮೇಲೆ ಮಾನವ ಕಲ್ಯಾಣದ ಬೌದ್ಧ ಧಮ್ಮ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಂಡು ನಡೆಯಬೇಕಿದೆ. ಸಾಮೂಹಿಕ ನಾಯಕತ್ವ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿದೆ ಎಂದರು.
ಎನ್ನುವ ಘೋಷಣೆಯಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ನಡೆಯಬೇಕು. ಧಮ್ಮ ದೀಕ್ಷಾ ಮತ್ತು ಧಮ್ಮ ಚಿಂತನಾ ಸಭೆ ಅತ್ಯಂತ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಜನರು ಭಾಗವಹಿಸಿದ್ದಲ್ಲಿ ಅವರೆಲ್ಲರಲ್ಲಿ ಸಕಾರಾತ್ಮಕವಾಗಿ ಧಮ್ಮ
ಪ್ರಜ್ಞೆ ಮೂಡುವುದರಲ್ಲಿ ಸಂದೇಹವಿಲ್ಲ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯಿಂದ ಜನರು ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು
ಸಲಹೆ ನೀಡಿದರು.
Related Articles
ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 5 ಗಂಟೆವರೆಗೆ ಚರ್ಚೆ ಮತ್ತು ದೀಕ್ಷಾ ಸಮಾರಂಭ ಜರುಗಲಿದೆ. ಅಂದು ಪ್ರಗತಿಪರ ಹಿತ ಚಿಂತಕರು, ದಲಿತ ಮುಖಂಡರು, ಗಣ್ಯರು ಅಪಾರ ಸಂಖ್ಯೆಯಲ್ಲಿ ಡಾ.ಅಂಬೇಡ್ಕರ್ ಅಭಿಮಾನಿಗಳು, ಚಿಂತಕರು ಭಾಗವಹಿಸಲಿದ್ದಾರೆ. ದಲಿತ ಯುವ ಸಮೂಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
Advertisement
ದಲಿತ ಸಂಘಟನೆಗಳ ಮುಖಂಡರಾದ ಮಹಾದೇವ ದಿಗ್ಗಿ, ಅಶೋಕ ಹೊಸಮನಿ, ರಾಹುಲ್ ನಾಟೇಕಾರ, ಶರಣು ದೋರನಹಳ್ಳಿ, ಮೌನೇಶ ಬೀರನೂರ, ಗುರು ಬಾಣತಿಹಾಳ ಸೇರಿದಂತೆ ಇತರರು ಇದ್ದರು.