Advertisement
ಕೊರೊನಾ ಪ್ರಕರಣವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸೋಮವಾರದಿಂದ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕೊರೊನಾ ಪರೀಕ್ಷೆ ಹಮ್ಮಿಕೊಂಡಿದ್ದು, ರವಿವಾರ ದ.ಕ. ಜಿಲ್ಲೆಯಲ್ಲಿ 43 ಮಂದಿಗೆ ಕೊರೊನಾ ದೃಢಪಟ್ಟಿದೆ. ದ.ಕ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,784 ಮಾಸ್ಕ್ ಉಲ್ಲಂಘನೆ ಪ್ರಕರಣ ಪತ್ತೆಯಾಗಿದ್ದು, 5,75,159 ರೂ. ದಂಡ ವಸೂಲಿ ಮಾಡಲಾಗಿದೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ರವಿವಾರ 231 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. 59 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 2,145 ಸಕ್ರಿಯ ಪ್ರಕರಣಗಳಿವೆ. ಇದು ವರೆಗೆ ಒಟ್ಟು 154 ಜನರು ನಿಧನ ಹೊಂದಿದ್ದಾರೆ. ಕೊಡಗು: 115 ಪಾಸಿಟಿವ್
ಮಡಿಕೇರಿ : ಜಿಲ್ಲೆಯಲ್ಲಿ ರವಿವಾರ 115 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್‌ಪ್ರಕರಣಗಳ ಸಂಖ್ಯೆ 3,1 15 ಆಗಿದ್ದು, 2,446 ಮಂದಿ ಗುಣಮುಖರಾಗಿದ್ದಾರೆ. 621 ಸಕ್ರಿಯ ಪ್ರಕರಣಗಳಿವೆ. ಒಟ್ಟು 48 ಸಾವು ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
Related Articles
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 278 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 193 ಮಂದಿ ಗುಣಮುಖರಾಗಿದ್ದಾರೆ. 271 ಮಂದಿಗೆ ಸಂಪರ್ಕದ ಮೂಲಕ ತಗಲಿದೆ. ಕೇರಳದಲ್ಲಿ 8,553 ಪ್ರಕರಣ ಕೇರಳದಲ್ಲಿ ರವಿವಾರ 8,553 ಮಂದಿಗೆ ಸೋಂಕು ದೃಢಪಟ್ಟಿದೆ. 23 ಮಂದಿ ಮೃತಪಟ್ಟಿದ್ದಾರೆ.
Advertisement
ಲಾಠೀಪ್ರಹಾರ
ಕೋವಿಡ್ ವ್ಯಾಪಕವಾಗುತ್ತಿರುವ ಕಾರಣ ಜನರು ಸೇರುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಜಿಲ್ಲೆಯ ವಿವಿಧೆಡೆ ಗುಂಪು ಸೇರಿದ ಜನರನ್ನು ಪೊಲೀಸರು ಲಾಠೀಪ್ರಹಾರ ಮಾಡಿ ಚದುರಿಸಿದರು.