ಢಾಕಾ: ಪುಲ್ವಾಮಾ ಭೀಕರ ಉಗ್ರ ದಾಳಿಯ ಬಳಿಕ ಎಲ್ಲೆಡೆ ವ್ಯಾಪಕ ಭದ್ರತೆ ಕೈಗೊಂಡಿರುವ ವೇಳೆಯಲ್ಲೇ,ನೆರೆಯ ಬಾಂಗ್ಲಾದೇಶದ ಚಿತ್ತಗಾಂಗ್ನ ಶಾ ಅಮಾನತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುತ್ತಿದ್ದ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಲಾಗಿದೆ.
ಗನ್ಮ್ಯಾನ್ವೋರ್ವ ಹೈಜಾಕ್ ನಡೆಸಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಬಿಮನ್ ಬಿಜಿ 147 ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದ್ದು, ಎಲ್ಲಾ 145 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ವಿಮಾನ ನಿಲ್ದಾಣವನ್ನು ಸುತ್ತುವರಿದಿದ್ದಾರೆ. ಓರ್ವ ಆಗಂತುಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.