ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಓಡುತ್ತದೆ ಎಂಬ ನಂಬಿಕೆ ಈಗ ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕ ವಾಗಿ ಕಂಟೆಂಟ್ ಸಿನಿಮಾಗಳು ಗೆಲುವು ಸಾಧಿಸಿವೆ. ಈಗ ಇದೇ ವಿಶ್ವಾಸದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅದು “ಧೈರ್ಯಂ ಸರ್ವತ್ರ ಸಾಧನಂ’. ಈ ಚಿತ್ರ ಫೆ.23 ರಂದು ತೆರೆಕಾಣುತ್ತಿದೆ.
ಧೈರ್ಯಂ ಸರ್ವತ್ರ ಸಾಧನಂ ಈ ಚಿತ್ರದಲ್ಲೂ ಸಮಾಜದಲ್ಲಿ ನೋಡವರು ಬೆಂದವರ ಕಥೆಯನ್ನು ಹೇಳಲಾಗಿದ್ದು ಚಿತ್ರದಲ್ಲಿ ಬಂದೂಕು, ಹಂದಿ ಬೇಟೆ ಸೇರಿದಂತೆ ಹಲವು ಅಂಶಗಳನ್ನು ಹೇಳಲಾಗಿದೆ. ಚಿತ್ರದಲ್ಲಿ 15 ನಿಮಿಷದ ಗ್ರಾಫಿಕ್ಸ್ ಇದೆಯಂತೆ. 4 ರೀತಿಯ ಹಂದಿ 2 ಮೊಲ ಹಾಗೂ ಖಳನಾಯಕನ ಮನೆಯನ್ನು ಸಿಜಿ ಮೂಲಕ ಮಾಡಲಾಗಿದ್ದು, ಇದಕ್ಕೆ ತುಂಬಾ ಸಮಯ ಹಿಡಿಯಿತು. ತುಂಬಾ ನೈಜವಾಗಿ ಕಾಣುವಂತೆ ಸಿಜಿ ಕೆಲಸ ಮೂಡಿಬಂದಿದೆಯಂತೆ.
“ಜನರಿಗೆ ತುಂಬಾ ಇಷ್ಟ ಆಗುವ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ. ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಕಥೆಗಳು ಇರುತ್ತವೆ. ಪ್ರೇಕ್ಷಕರ ನಾಡಿ ಮಿಡಿತಕ್ಕೆ ಸಿನಿಮಾ ಮಾಡಿದ್ದೇವೆ’ ಎನ್ನುವುದು ನಿರ್ಮಾಪಕರಾದ ಆನಂದ್ ಬಾಬು ಅವರ ಮಾತು.
“ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಕ್ಕೆ ಎ. ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತ ರಚನೆ ಮಾಡಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಧೈರ್ಯ ಸರ್ವತ್ರ ಸಾಧನಂ’ ಸಿನಿಮಾದ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.
ಹೃದಯ ಶಿವ, ಕಿನ್ನಾಳ್ ರಾಜ್, ಅರಸು ಅಂತಾರೆ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚೇತನ್ ನಾಯಕ್, ಪ್ರೀತಿ ಭಾರದ್ವಾಜ್, ಶಶಾಂಕ್ ಶೇಷಗಿರಿ, ಪಂಚಮ್ ಜೀವ, ದೇವಾನಂದ್ ವರಪ್ರಸಾದ್ ಮೊದಲಾದವರು ಸಿನಿಮಾದ ಗೀತೆಗಳಿಗೆ ಧ್ವನಿಯಾಗಿದ್ದಾರೆ.