ಕೂಲಿಜ್ (ಆಂಟಿಗಾ): “ಬೇಬಿ ಎಬಿ’ ಎಂದೇ ಕರೆಯಲ್ಪಡುವ ದಕ್ಷಿಣ ಆಫ್ರಿಕಾದ ಡಿವಾಲ್ಡ್ ಬ್ರೇವಿಸ್ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಶಿಖರ್ ಧವನ್ ದಾಖಲೆಯನ್ನು ಮುರಿದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ 7ನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ 138 ರನ್ ಬಾರಿಸುವ ಹಾದಿಯಲ್ಲಿ ಬ್ರೇವಿಸ್ ನೂತನ ದಾಖಲೆ ಸ್ಥಾಪಿಸಿದರು.
ಈ ಕೂಟದಲ್ಲಿ ಬ್ರೇವಿಸ್ ಅವರ ಒಟ್ಟು ರನ್ ಗಳಿಕೆ 506ಕ್ಕೆ ಏರಿತು (6 ಇನ್ನಿಂಗ್ಸ್, 2 ಶತಕ). ಧವನ್ 2008ರ ಕೂಟದ 7 ಪಂದ್ಯಗಳಿಂದ 3 ಶತಕ ಸಿಡಿಸಿ 505 ರನ್ ಪೇರಿಸಿದ್ದರು.
ಭಾರತದ ಎಡಗೈ ಆರಂಭಿಕನ 14 ವರ್ಷಗಳ ಹಿಂದಿನ ದಾಖಲೆಯೀಗ ಪತನಗೊಂಡಿದೆ. 471 ರನ್ ಗಳಿಸಿರುವ ಆಸ್ಟ್ರೇಲಿಯದ ಬ್ರೆಟ್ ವಿಲಿಯಮ್ಸ್ 3ನೇ ಸ್ಥಾನದಲ್ಲಿದ್ದಾರೆ (1988).
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್-ದಬಾಂಗ್ ದಿಲ್ಲಿ ರೋಚಕ ಟೈ
ಎಬಿ ಡಿ ವಿಲಿಯರ್ ಶೈಲಿಯಲ್ಲೇ ಬ್ಯಾಟಿಂಗ್ ನಡೆಸುವ ಡಿವಾಲ್ಡ್ ಬ್ರೇವಿಸ್ ಮುಂದಿನ ವಾರದ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಕಣ್ಮಣಿ ಆಗಿದ್ದಾರೆ.