Advertisement

ಭಕ್ತಿಯೇ ಸುಲಭ ಸಾಧನ

03:47 PM Apr 23, 2018 | Team Udayavani |

ಸೊಲ್ಲಾಪುರ: ಭಕ್ತಿ, ಜ್ಞಾನ ವೈರಾಗ್ಯ, ಮುಕ್ತಿಯ ಸಾಧನಗಳ ಬಗ್ಗೆ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇವುಗಳಲ್ಲಿ ಭಕ್ತಿಯೇ ಸುಲಭವಾದ ಸಾಧನವೆಂದು  ನರೇಗಲ್‌ನ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ನುಡಿದರು. ನಗರದ ಬ್ರಹನ್ಮಠ ಹೊಟಗಿ ಮಠದ ಪೂಜ್ಯ ಲಿಂ| ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವದಂದು ವೀರತಪಸ್ವಿ ಮಂದಿರದಲ್ಲಿ ನಡೆದ  ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ವಿಷಯ ಕುರಿತು ಅವರು ಮಾತನಾಡಿದರು. 

Advertisement

ಪೂಜ್ಯೇಷು ಅನುರಾಗೋ ಭಕ್ತಿಃ ಎನ್ನುವ ಉಕ್ತಿಯಂತೆ ಪೂಜ್ಯರಾದ ಗುರು, ದೇವರು, ತಂದೆ, ತಾಯಿ, ಗೋಮಾತೆ ಮುಂತಾದವರ ಮೇಲಿರುವ ನಿಷ್ಕಲ್ಮಶವಾದ ಪ್ರೀತಿಯೇ ಭಕ್ತಿಯೆಂದು ಕರೆಯಲ್ಪಡುವುದು. ತಾನು ತನ್ನನ್ನು ಪ್ರೀತಿಸುವಷ್ಟೇ ಪೂಜ್ಯರನ್ನು ಪ್ರೀತಿಸಬೇಕು ಎಂದರು. ಭಕ್ತನಲ್ಲಿ ಸಂಪೂರ್ಣ ಸಮರ್ಪಣಾ ಮನೋಭಾವವಿರುತ್ತದೆ. 

ಅವನು ತನ್ನೆಲ್ಲಾ ಭಾರವನ್ನು ದೇವರಮೇಲೆ ಇಟ್ಟಿರುತ್ತಾನೆ. ಬೆಕ್ಕು ತನ್ನ ಮರಿಗಳನ್ನು ರಕ್ಷಿಸುವಂತೆ ದೇವರೇ ಭಕ್ತನನ್ನು ರಕ್ಷಿಸುತ್ತಾನೆ ಎಂದು ಹೇಳಿದರು. ಹೊಟಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಕಲ್ಲಹಿಪ್ಪರಗಿಯ ಶಾಂತಲಿಂಗ ಶಿವಾಚಾರ್ಯರು, ಹಾವಿನಾಳದ ಮಹಾಂತೇಶ್ವರ ಶಿವಾಚಾರ್ಯರು, 

ಷಣ್ಮುಖ ಶಿವಾಚಾರ್ಯರು, ಜಿಂತೂರದ ಅಮೃತೇಶ್ವರ ಶಿವಾಚಾರ್ಯರು, ರಾಘವಾಂಕ ಶ್ರೀಗಳು ಮತ್ತು ಅಕ್ಕಲಕೋಟ ಶಾಸಕ ಸಿದ್ಧಾರಾಮ ಮೆತ್ರೆ, ಬಸವರಾಜ ಶಾಸ್ತ್ರೀ  ಸೇರಿದಂತೆ ನಗರದ ಭಕ್ತರು ಪಾಲ್ಗೊಂಡಿದ್ದರು. ಸಂಕಲ್ಪಸಿದ್ಧಿ ಕಾರ್ಯಮಹೋತ್ಸವದಲ್ಲಿ ಉತ್ತಮ ಯೋಗದಾನ ಮಾಡಿರುವುದರಿಂದ ಕುಂಭಾರಿ ಗ್ರಾಮದ  ಸದ್ಭಕ್ತರನ್ನು ಸನ್ಮಾನಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next