Advertisement

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

07:47 PM Jul 30, 2021 | Team Udayavani |

ಶ್ರೀರಂಗಪಟ್ಟಣ : ಕೊರೊನಾ ಮೂರನೆ ಅಲೆಯ ಆತಂಕ ಇದ್ರು ಎರಡನೆ ಅಲೆ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯ ಪ್ರಸಿದ್ದ ದೇಗುಲಗಳಾದ ಶ್ರೀರಂಗಪಟ್ಟಣದ ರಂಗನಾಥ ಹಾಗೂ ಗಂಜಾಮ್ ನಿಮಿಷಾಂಭ ದೇಗುಲಕ್ಕೆ ಹೆಚ್ಚಿನ‌ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.‌ ಇದರಿಂದ ಮತ್ತೆ ಮೂರನೇ ಅಲೆಯ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವ ಮುನ್ನೆಚ್ಚರಿಕೆಯಿಂದ ಕೆಲವು ದಿನಗಳನ್ನು ಹೊರತು ಪಡಿಸಿ ವಿಶೇಷ ದಿನ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೇಗುಲಕ್ಕೆ‌ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

Advertisement

ಪಟ್ಟಣದ ರಂಗನಾಥ ದೇಗುಲಕ್ಕೆ ಬುಧವಾರ, ಶನಿವಾರ ,ಭಾನುವಾರ ಸೇರಿ‌ ಸಾರ್ವತ್ರಿಕ ರಜಾ ದಿನದಲ್ಲಿ ಭಕ್ತರಿಗೆ ನಿರ್ಬಂಧ ಹೇರಿದ್ರೆ, ಗಂಜಾಮ್ ನ ನಿಮಿಷಾಂಭ ದೇಗುಲಕ್ಕೆ ಹುಣ್ಣಿಮೆ- ಅಮವಾಸ್ಯೆ, ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ, ಸೇರಿದಂತೆ ಸಾರ್ವತ್ರಿಕ ರಜಾ ದಿನಗಳಲ್ಲಿ ಭಕ್ತರಿಗೆ ಪ್ರವೇಶ‌ ನಿರ್ಬಂಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ :ತನ್ನ ಜಮೀನಿನಲ್ಲೇ ರೈತನ ಮೃತದೇಹ ಪತ್ತೆ :ಕಾಡು ಪ್ರಾಣಿಗಳ ದಾಳಿ ಶಂಕೆ?

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ‌ ಈ ನಿರ್ಬಂಧ‌ ಆದೇಶ ಹೊರಡಿಸಿದ್ದು, ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಿಷ್ಟಾಚಾರ ವ್ಯವಸ್ಥೆಯುಳ್ಳ ಗಣ್ಯ ವ್ಯಕ್ತಿಗಳಿಗಷ್ಟೆ ಪೂಜೆ ದರ್ಶನಕ್ಕೆ ಕೊರೊನಾ ಮಾರ್ಗಸೂಚಿ ಅನುಸರಿಸಿ ಬರಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next